ಸುದ್ದಿಕನ್ನಡ ವಾರ್ತೆ
Goa: ಗೋವಾದ ಮಾರ್ಗೋವಾ ಪೆÇಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಪೆÇಲೀಸ್ ಕಾನ್ಸ್‍ಟೇಬಲ್ ಸೋನು ಫಾಲೆ ರವರಿಗೆ ಕುಠ್ಠಾಳಿ ಸೇತುವೆಯ ಬಳಿ ಬ್ಯಾಗ್ ನಲ್ಲಿ ಪತ್ತೆಯಾದ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳ ಬ್ಯಾಗ್ ಅನ್ನು ಬಾರ್ದೇಸ ನಲ್ಲಿರುವ ಮಹಿಳೆಗೆ ಹಿಂತಿರುಗಿಸಿ ಕರ್ತವ್ಯನಿಷ್ಠೆ ಮೆರೆದಿದ್ದಾರೆ. ಕಾನಸ್ಟೆಬಲ್ ಫಾಲೆ ಅವರ ಈ ಪ್ರಾಮಾಣಿಕತೆಗಾಗಿ ರಾಜ್ಯದೆಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪೆÇಲೀಸ್ ಕಾನ್ಸ್‍ಟೇಬಲ್ ಸೋನು ಫಾಲೆ ಮಡಗಾಂವ್ ನಗರ ಪೆÇಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವನು ಕೆಲಸಕ್ಕೆ ಬರುತ್ತಿದ್ದಾಗ, ಕುಠ್ಠಾಳಿ ಸೇತುವೆಯ ಮೇಲೆ ಒಂದು ಚೀಲವನ್ನು ಕಂಡರು. ಅವರು ಕಾರನ್ನು ನಿಲ್ಲಿಸಿ ಬ್ಯಾಗ್ ಪರಿಶೀಲಿಸಿದಾಗ, ಅದರಲ್ಲಿ ಚಿನ್ನಾಭರಣ ಇರುವುದು ಕಂಡುಬಂದಿದೆ. ಅವರು ತನ್ನೊಂದಿಗೆ ಚೀಲವನ್ನು ಮಡ್ಗಾಂವ್ ಪೆÇಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಪೆÇಲೀಸ್ ಇನ್ಸ್‍ಪೆಕ್ಟರ್ ತುಳಶಿದಾಸ್ ನಾಯಕ್ ಅವರಿಗೆ ಒಪ್ಪಿಸಿ, ಅವರು ಘಟನೆಯನ್ನು ವಿವರಿಸಿದರು.

 

ಆ ನಂತರ, ಆ ಬ್ಯಾಗ್ ಯಾರದ್ದು ಎಂದು ವಿಚಾರಣೆ ನಡೆಸಿದಾಗ, ಆ ಬ್ಯಾಗ್ ಬಾದೇಸ ತಾಲೂಕಿನ ಮಹಿಳೆಯೊಬ್ಬರದ್ದು ಎಂದು ತಿಳಿದುಬಂದಿದೆ. ಅದರಂತೆ, ಮಹಿಳೆಯನ್ನು ಕರೆಸಿ ಸುಮಾರು ಐದು ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಚೀಲವನ್ನು ಅವರಿಗೆ ಹಸ್ತಾಂತರಿಸಲಾಯಿತು.