ಸುದ್ದಿಕನ್ನಡ ವಾರ್ತೆ
Goa: ಗೋವಾದಿಂದ ಅಯೋಧ್ಯೆ ಶ್ರೀ ರಾಮಲಲ್ಲಾನ ದರ್ಶನಕ್ಕೆ ತೆರಳುವ ಭಕ್ತಿಗೆ ಇದೋ ಸಂತಸದ ಸುದ್ದಿ. ಅಯೋಧ್ಯೆ-ಉತ್ತರ ಪ್ರದೇಶದಲ್ಲಿ ಗೋವಾ ರಾಮ ನಿವಾಸ ನಿರ್ಮಾಣಕ್ಕಾಗಿ ಗೋವಾ ರಾಜ್ಯ ಸರ್ಕಾರವು ಸುಮಾರು 23.57 ಕೋಟಿ ರೂ. ಮೌಲ್ಯದ 3,801 ಚದರ ಮೀಟರ್ ಭೂಮಿಯನ್ನು ಅಯೋಧ್ಯೆಯಲ್ಲಿ ಖರೀದಿಸಿದೆ. ರಾಮಲಲ್ಲಾ ದರ್ಶನಕ್ಕೆ ಹೋಗುವ ಗೋಮಂತಕದ ಜನರು ಮುಂಬರುವ ವರ್ಷಗಳಲ್ಲಿ ಈ ವಸತಿ ಸೌಕರ್ಯದ ಪ್ರಯೋಜನವನ್ನು ಪಡೆದುಕೊಳ್ಳಲಿದ್ದಾರೆ. (Purchase of “Goa Niwas” land in Ayodhya).

 

ಕಳೆದ ವರ್ಷ ಕೇಂದ್ರ ಸರ್ಕಾರ ಕೋಟ್ಯಂತರ ಭಾರತೀಯರ ಕನಸಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ನನಸಾಗಿಸಿತು. ರಾಮ ಮಂದಿರವನ್ನು ಜನವರಿ 22, 2024 ರಂದು ಪ್ರಧಾನಿ ನರೇಂದ್ರ ಮೋದಿ ಪ್ರಾಣಪ್ರತಿಷ್ಠೆ ಪೂಜೆ ನೆರವೇರಿಸಿದ್ದರು. ಅದಾದ ನಂತರ, ದೇಶಾದ್ಯಂತದ ಲಕ್ಷಾಂತರ ಭಕ್ತರು ಅಯೋಧ್ಯೆಗೆ ಹೋಗಿ ರಾಮಲಲ್ಲಾ ದರ್ಶನ ಪಡೆದರು. ದೇವಾಲಯ ಉದ್ಘಾಟನೆಯಾದ ಕೂಡಲೇ ಗೋವಾದ ರಾಮ ಭಕ್ತರು ಕೂಡ ಅಯೋಧ್ಯೆಗೆ ತೆರಳಿ ದರ್ಶನ ಪಡೆದರು. ಗೋವಾದಿಂದ ಅಯೋಧ್ಯೆಗೆ ತೆರಳುವ ಭಕ್ತರಿಗಾಗಿ ಅಯೋಧ್ಯೆಯಲ್ಲಿ ಗೋವಾ ನಿವಾಸ್ ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್ ಘೋಷಿಸಿದ್ದರು.

ಅದರಂತೆ, ಅಯೋಧ್ಯೆಯಲ್ಲಿ ಗೋವಾ ರಾಮ ನಿವಾಸ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಸಾವಂತ್ ಅಧೀಕೃತವಾಗಿ ಘೋಷಿಸಿದರು. ಸಾಮಾನ್ಯ ಆಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಶ್ರೇಯಸ್ ಡಿ ಸಿಲ್ವಾ ಅವರು ಗೋವಾ ರಾಮ್ ನಿವಾಸ್‍ಗಾಗಿ ಸುಮಾರು 23.57 ಕೋಟಿ ರೂ. ಮೌಲ್ಯದ 3,801 ಚದರ ಮೀಟರ್ ಭೂಮಿಯನ್ನು ಖರೀದಿಸಿರುವುದಾಗಿ ಘೋಷಿಸಿದರು.