ಸುದ್ದಿಕನ್ನಡ ವಾರ್ತೆ
Goa: ಮಿರಾಮಾರ್ ನ ಎಂ. ಸಾಳಗಾಂವಕರ್ ಕಾನೂನು ಕಾಲೇಜು ಬಳಿಯ ‘ಓಶಾನಿಯಾ’ ಕಟ್ಟಡದ ಛಾವಣಿಯ ಮೇಲಿನ ಫ್ಲಾಟ್‍ನಲ್ಲಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ. ಈ ಕುರಿತು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. (A fire broke out in the flat on the roof of the building).
ಏನಿದು ಘಟನೆ…?
ಪಣಜಿ ಅಗ್ನಿಶಾಮಕ ಇಲಾಖೆಗೆ ಇಂದು, ಶನಿವಾರ, ಮಾರ್ಚ್ 22, ಮಧ್ಯಾಹ್ನ 2.11 ರ ಸುಮಾರಿಗೆ ಮಿರಾಮಾರ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಸಿಕ್ಕಿತು. ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಸತತ ಕಾರ್ಯಾಚರಣೆ ನಡೆಸಿದರೂ ಕೂಡ ಬೆಂಕಿಯ ಜ್ವಾಲೆಯನ್ನು ಕಡಿಮೆ ಮಾಡಲು ಸಾಧ್ಯವಾಗಿರಲಿಲ್ಲ. . ಬೆಂಕಿಯ ಸ್ವರೂಪವನ್ನು ಪರಿಗಣಿಸಿ, ಅವರು ಪಣಜಿ ಪ್ರಧಾನ ಕಚೇರಿಯಲ್ಲಿರುವ ಸಿಬ್ಬಂಧಿ ಪಡೆಯಿಂದ ಸಹಾಯ ಕೋರಿದರು. ಸ್ವಲ್ಪ ಸಮಯದ ನಂತರ, ಮಾಪ್ಸಾ ಮತ್ತು ಪಿಲಾರ್ ಅಗ್ನಿಶಾಮಕ ಇಲಾಖೆಗಳನ್ನು ಸಹ ಕರೆಯಲಾಯಿತು. ನಾಲ್ಕು ಅಗ್ನಿಶಾಮಕ ವಾಹನಗಳ ಸಹಾಯದಿಂದ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. (The fire was brought under control with the help of four fire tenders.).
ಮೀರಾಮಾರ್ ನ ವಿ. ಎಂ. ಸಲ್ಗಾಂವ್ಕರ್ ಕಾನೂನು ಕಾಲೇಜು ಬಳಿಯ ‘ಓಶಾನಿಯಾ’ ಕಟ್ಟಡದ ಛಾವಣಿಯ ಮೇಲೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದ ಛಾವಣಿಯ ಮೇಲೆ ವೆಲ್ಡಿಂಗ್ ಕೆಲಸ ನಡೆಸಲಾಗುತ್ತಿದೆ. ಒಂದು ಕಿಡಿ ಬಿದ್ದು ಪಕ್ಕದ ಫ್ಲಾಟ್‍ಗೆ ಬೆಂಕಿ ಹೊತ್ತಿಕೊಂಡಿತು. ಅಗ್ನಿಶಾಮಕ ದಳದವರು ಫ್ಲಾಟ್‍ಗೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಅಷ್ಟರಲ್ಲಿ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.