ಸುದ್ದಿಕನ್ನಡ ವಾರ್ತೆ
Goa: ಗೋವಾದ ಪೆಡ್ನೆ ತಾಲೂಕಿನ ಕೇರಿ ಬೀಚ್ನಲ್ಲಿ ಪರವಾನಗಿ ಇಲ್ಲದೆ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಪುಣೆ ಮತ್ತು ಮುಂಬೈನ 8 ಜನರನ್ನು ತೆರೆಖೋಲ್ ಕರಾವಳಿ ಭದ್ರತಾ ಪೆÇಲೀಸರು ಬಂಧಿಸಿದ್ದಾರೆ. ಈ ಘಟನೆ ಮಾರ್ಚ್ 22, ಶನಿವಾರ ಮಧ್ಯಾಹ್ನ 12 ಗಂಟೆಗೆ ನಡೆದಿದೆ. ಈ ಸಮಯದಲ್ಲಿ, ಸಂಬಂಧಪಟ್ಟ ಪ್ರವಾಸಿಗರಿಂದ ವಿವಿಧ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಯಿತು. ಈ ಸಂದರ್ಭದಲ್ಲಿ, ತೆರೆಖೋಲ್ ಕರಾವಳಿ ಭದ್ರತಾ ಪೆÇಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಕ್ರಮ್ ನಾಯಕ್ ಮತ್ತು ಅವರ ನೇತೃತ್ವದಲ್ಲಿ ಪೆÇಲೀಸ್ ಸಿಬ್ಬಂದಿ ಕ್ರಮ ಕೈಗೊಂಡರು. ಈ ಪ್ರಕರಂವನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಲಾಗಿದೆ.
ಪ್ರಸ್ತುತ ಪ್ರವಾಸಿ ಋತುವಿನ ಆರಂಭದಲ್ಲಿ ಸಂಭವಿಸಿದ ಕೆಲವು ಅಹಿತಕರ ಘಟನೆಗಳಿಂದಾಗಿ, ರಾಜ್ಯದಲ್ಲಿ ಪರವಾನಗಿ ಇಲ್ಲದ ಸಾಹಸ ಕ್ರೀಡೆಗಳನ್ನು ಆಯೋಜಿಸುವುದರ ಮೇಲೆ ಕೆಲವು ನಿಬರ್ಂಧಗಳನ್ನು ವಿಧಿಸಿದೆ. ಪ್ರವಾಸೋದ್ಯಮ ಇಲಾಖೆ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿರುವುದು ಹಲವೆಡೆ ಕಂಡಿಬರುತ್ತಿದೆ.
ಕಲಂಗುಟ್ ನಲ್ಲಿ ಸಮುದ್ರ ವಿಹಾರದಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಬಿದ್ದಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಖೇಡ್ ರತ್ನಗಿರಿ ನಿವಾಸಿ ಸೂರ್ಯಕಾಂತ್ ಪೆÇೀಫಲ್ಕರ್ (45) ಅಪಘಾತದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಖೇಡ್- ಮಹಾರಾಷ್ಟ್ರದ ಪೆÇೀಫಲ್ಕರ್, ಚಿಂಚ್ವಿಲ್ಕರ್ ಮತ್ತು ಹಂಬೀರ್ ಕುಟುಂಬಗಳ ಹದಿಮೂರು ಜನರು ಕ್ರಿಸ್ಮಸ್ ರಜೆಗಾಗಿ ಗೋವಾಕ್ಕೆ ಬಂದಿದ್ದರು ಎನ್ನಲಾಗಿದೆ.