ಸುದ್ದಿ ಕನ್ನಡ ವಾರ್ತೆ

ಅಂಕೋಲಾ : ಅನಾರೋಗ್ಯದ ಎಂದು ಆಸ್ಪತ್ರೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ದಾರಿ ಮದ್ಯೆ ಬಸ್ ನಲ್ಲಿಯೇ ಮೂರನೇ ತರಗತಿಯ ಎಂಟು ವರ್ಷದ ವಿದ್ಯಾರ್ಥಿಯೋರ್ವಳು ಮೃತಪಟ್ಟ ಘಟನೆ ತಾಲೂಕಿನಲ್ಲಿ‌ ನಡೆದಿದೆ.

ಕಾರವಾರ ತಾಲೂಕಿನ ಮಾಜಾಳಿ ಗ್ರಾಮದ ಸ್ನೇಹಾ ಸಾಗರ ಕೋಠಾರಕರ (8) ವಿದ್ಯಾರ್ಥಿ ಮೃತಪಟ್ಟವಳು. ಇವಳಿಗೆ ಕಳೆದ ನಾಲ್ಕು ದಿನದ ಹಿಂದೆ ಕಪ್ ಆಗಿ ಅನಾರೋಗ್ಯದಿಂದ ಇದ್ದವಳಿಗೆ ಕುಮಟಾ ತಾಲೂಕಿನ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬರುವ ಸಂದರ್ಭದಲ್ಲಿ ಬಸ್ ಮೂಲಕ ಕಾರವಾರದಿಂದ ಬರುವಾರ ಅಮದಳ್ಳಿ ಬಳಿ ತಲೆ ನೋವು ಎಂದು ಹೇಳಿ ವಾಂತಿ ಮಾಡಿಕೊಂಡಾಗ ಆಕೆಯನ್ನು ತಕ್ಷಣ ಅಂಕೋಲಾ ತಾಲೂಕಿನ ಹಟ್ಟಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಅಲ್ಲಿಂದ ಅಲ್ಲಿ ಆಸ್ಪತ್ರೆ ವೈದ್ಯ ಜುಬೇರ ಖಾನ ಅವರು ತಮ್ಮ ಕಾರಿನಲ್ಲಿಯೇ ತಕ್ಷಣ ಅಂಕೋಲಾ ತಾಲೂಕಾಸ್ಪತ್ರೆಗೆ ಕರೆತಂದು‌ ಇಲ್ಲಿಯ ವೈದ್ಯರಾದ ಡಾ ಅನುಪಮಾ ಮತ್ತು ಡಾ. ಜಗದೀಶ ನಾಯಕ ಚಿಕಿತ್ಸೆ ನೀಡಲು ಮುಂದಾದಾಗ ಅಷ್ಟೋತ್ತಿಗಾಗಲೇ ವಿದ್ಯಾರ್ಥಿ ಮೃತಪಟ್ಟಿದ್ದಾಳೆಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿದ್ದ ಬಾಲಕಿ ತಂದೆ ತಾಯಿ ಮತ್ತು ಬಂದು ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಬಾಲಕಿ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿನಿ ಅಗಿದ್ದಳು ಎನ್ನಲಾಗಿದೆ. ಬಾಲಕಿ ಸಾವಿನ ಸುದ್ದಿ ತಿಳಿಯುತ್ತಲೇ ಅಂಕೋಲಾ ಪೂಜಗೇರಿಯ ಬಾಲಕಿ ಅಜ್ಜಿಮನೆಯ ಸಂಬಂಧಿಕರು ಆಸ್ಪತ್ರೆ ಬಳಿ ಆಗಮಿಸಿದರು. ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಪಿಎಸ್ಐ ಸುನೀಲ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.