ಸುದ್ದಿಕನ್ನಡ ವಾರ್ತೆ
Goa : ಗೋವಾದಲ್ಲಿ ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರವಾಸಕ್ಕೆ ತೆರಳಿದ್ದ ಕರ್ನಾಟಕ ಮೂಲದ ಇಬ್ಬರು ಯುವಕರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಕರ್ನಾಟಕ ಮೂಲದ ಪ್ರಕಾಶ್ ಹಡ್ಪದ್ (22) ಮತ್ತು ಶರಣಪ್ಪ ಹಡ್ಪದ್ (21) ಇಬ್ಬರೂ ಗೋವಾದ ಖಾಂಡೆಪರ್ ನಿವಾಸಿಗಳಾಗಿದ್ದಾರೆ. ಹೋಳಿ ಪಿಕ್ನಿಕ್ ಗೆ ತೆರಳಿದ್ದ ಸಮಯದಲ್ಲಿ ಮಹದಾಯಿ ನದಿಯ ಗಂಜೇಮ್‍ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ, ಮೃತದೇಹಗಳನ್ನು ಧಾರಾಬಾಂದೋರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಪಂಚನಾಮೆ ನಡೆಸಿದ್ದಾರೆ.