ಸುದ್ದಿ ಕನ್ನಡ ವಾರ್ತೆ
ಶಿರಸಿ: ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ, ಪುತ್ರ ಸಹಿತ ಶಿರಸಿ ಶಾಸಕ ಭೀಮಣ್ಣ ನಾಯ್ಕ ಹೋಳಿ ಸಂಭ್ರಮದಲ್ಲಿ ಮಿಂದೆದ್ದರು.
ಶುಕ್ರವಾರ ನಗರದಲ್ಲಿ ಹೋಳಿಯಲ್ಲಿ ಭಾಗವಹಿಸಿದ ಭೀಮಣ್ಣ, ಏಕತೆಯ, ಪ್ರೀತಿ ಸಹಬಾಳ್ವೆಯ ಸಂಕೇತ ಹೋಳಿ. ಶಿರಸಿ ಹೋಳಿಗೆ ವಿಶೇಷತೆ ಇದೆ. ಹೋಳಿಗೆ ನಾಲ್ಕು ದಿನ ಮೊದಲು ದಿನದಿಂದ ಪ್ರತಿದಿನ ರಾತ್ರಿ ವೇಳೆ ನಡೆಯುವ ಬೇಡರ ವೇಷ ಈ ನೆಲದ ಸಿರಿವಂತಕೆಯ ಸಾಕ್ಷಿಯಾಗಿದೆ ಎಂದರು.