ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದಲ್ಲಿ ನಡೆಯುತ್ತಿರುವ ಬಿಜೆಪಿ ಸದಸ್ಯತ್ವ ಅಭಿಯಾನವು ರಾಜ್ಯದಲ್ಲಿ ನಡೆಯುವ 2027 ರ ವಿಧಾನಸಭಾ ಚುನಾವಣೆಯ ದೃಷ್ಠಿಯಿಂದ ಮಹತ್ವದ್ದಾಗಿದೆ. ಗೋವಾದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಹೆಚ್ಚು ಅನುಕೂಲವಾಗಲಿದೆ. ಸಬಕಾ ಸಾಥ್ ಸಬಕಾ ವಿಕಾಸ್ ತತ್ವದಲ್ಲಿ ಕಾರ್ಯ ನಿರ್ವಹಿಸುವ ಬಿಜೆಪಿ ಪಕ್ಷಕ್ಕೆ ಎಲ್ಲ ಧರ್ಮದ ಮತ್ತು ಜಾತಿಯ ನಾಗರೀಕರು ಸದಸ್ಯರಾಗಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಕರೆ ನೀಡಿದರು.

ಪಣಜಿಯ ಬಿಜೆಪಿ ಕಛೇರಿಯಲ್ಲಿ ಆಯೋಜಿಸಿದ್ದ ಸದಸ್ಯತ್ವ ಅಭಿಯಾನದ ಶುಭಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿಯು ದೇಶ ಮೊದಲು ಎಂಬ ತತ್ವದ ಅಡಿಯಲ್ಲಿ ಕೆಲಸ ಮಾಡುವ ಪಕ್ಷವಾಗಿದೆ. ಇದರಿಂದಾಗಿ ಯಾರಿಗೆ ದೇಶಸೇವೆ ಮಾಡಬೇಕೆಂದಿದೆಯೋ ಅವರು ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಬೇಕು. ಕಳೆದ 60 ವರ್ಷಗಳಲ್ಲಿ ಆಗದೇ ಇದ್ದ ಅಭಿವೃದ್ಧಿ ಕಾರ್ಯ ಕಳೆದ 10 ವರ್ಷಗಳಲ್ಲಿ ಆಗಿದೆ. ಕಾಂಗ್ರೇಸ್ ಸರ್ಕಾರದ ಅಧಿಕಾರಾವಧಿಯಲ್ಲಿ ನಡೆದ ಭೃಷ್ಠಾಚಾರದ ಬಗ್ಗೆ ಯುವಕರು ಮಾಹಿತಿ ಪಡೆದುಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮನವಿ ಮಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾವಡೆ ಮಾತನಾಡಿ- ಬಿಜೆಪಿಯು ಸದಸ್ಯತ್ವ ಅಭಿಯಾನ ಆರಂಭಿಸಿದೆ. ಇದು ಚುನಾವಣಾ ಪ್ರಕ್ರಿಯೆಯ ಒಂದು ಭಾಗವಾಗಿದೆ. ಗೋವಾ ರಾಜ್ಯದಲ್ಲಿ ಸದಸ್ಯತ್ವಭಿಯಾನ ಆರಂಭಗೊಂಡಾಗಿನಿಂದ 31,000 ಕ್ಕೂ ಅಧಿಕ ಮಿಸ್ಡ ಕಾಲ್ ಜನತೆ ನೀಡಿದ್ದು, 1000 ಜನರು ಸದಸ್ಯತ್ವ ಪಡೆದುಕೊಂಡಿದ್ದಾರೆ, ಇತರರ ಸದಸ್ವತ್ವವೂ ಪೂರ್ಣಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ, ಸಚಿವ ಬಾಬುಶ್ ಮೊನ್ಸೆರಾತ್, ನರೇಂದ್ರ ಸಾವೈಕರ್, ಸರ್ವಾನಂದ ಭಗತ್ ಮತ್ತಿತರರು ಉಪಸ್ಥಿತರಿದ್ದರು.