ಸುದ್ದಿಕನ್ನಡ ವಾರ್ತೆ
Goa: ಗೋವಾ ಬೀಚ್ ಗಳಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡುತ್ತಿರುವುದರಿಂದ ಗೋವಾಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಗೋವಾ ಬಿಜೆಪಿ ಶಾಸಕ ಮೈಕಲ್ ಲೋಬೊ ಹೇಳಿದ್ದಾರೆ.
ಉತ್ತರ ಗೋವಾದ ಕಲಂಗುಟ್ ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು- ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾದರೆ ಅದಕ್ಕೆ ಸರ್ಕಾರ ಮಾತ್ರ ಕಾರಣವಲ್ಲ, ವ್ಯಾಪಾರಸ್ಥರೂ ಹೌದು. ಬೆಂಗಳೂರಿನ ಕೆಲವರು ವಡಾ ಪಾವ್, ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿದ್ದಾರೆ. ಇದು ವಿದೇಶಿಗರಿಗೆ ಇಷ್ಟವಿಲ್ಲ. ಇದಕ್ಕಾಗಿಯೇ ಕಳೆದ 2 ವರ್ಷಗಳಿಂದ ಗೋವಾ ರಾಜ್ಯದಲ್ಲಿ ಅಂತರಾಷ್ಟ್ರೀಯ ಪ್ರವಾಸೋದ್ಯಮ ಕುಸಿಯುತ್ತಿದೆ ಎಂದು ಮೈಕಲ್ ಲೋಬೊ ಹೇಳಿದರು.
ವಿದೇಶಿಗಳ ಯುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಪಾಲುದಾರರು ಜಂಟಿ ಸಭೆ ನಡೆಸಿ ವಿದೇಶಿ ಪ್ರವಾಸಿಗರು ಗೋವಾದಿಂದ ವಿಮುಖರಾಗುತ್ತಿರಲು ಕಾರಣಗಳನ್ನು ಅಧ್ಯಯನ ಮಾಡಬೇಕು ಎಂದು ಮೈಕಲ್ ಲೋಬೊ ಅಭಿಪ್ರಾಯಪಟ್ಟರು.