ಸುದ್ದಿ ಕನ್ನಡ ವಾರ್ತೆ

ಶಿರಸಿ: ತಾಲೂಕಿನ ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹುಳಗೋಳ ಗುಂಡಿಗದ್ದೆ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿದೆ.

ಮಂಗಳವಾರ ರಾತ್ರಿ ೧೦:೪೫ರ ಸುಮಾರಿಗೆ ಗುಂಡಿಗದ್ದೆ ಬಳಿ ಶಿರಸಿ ಯಲ್ಲಾಪುರ ರಸ್ತೆಯನ್ನು ದಾಟಿದ್ದು, ಇದರ ದೃಶ್ಯವನ್ನು ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷೆ ಉಷಾ ಹೆಗಡೆ ಸೆರೆ ಹಿಡಿದು ಮಾಹಿತಿ ನೀಡಿದ್ದಾರೆ.

ಸದೃಢವಾಗಿದ್ದ ಚಿರತೆ ನೋಡಿ ವಾಹನ ನಿಲ್ಲಿಸಿದ್ದಾರೆ.
ಈ ಭಾಗದ ರೈತರ ತೋಟದ ಅಂಚಿನಲ್ಲೂ ಹಿಂದೆ ಸುಮಾರು ಸಲ‌ ಕಂಡಿದ್ದು ಸಹಜ ಆತಂಕಕ್ಕೆ ಕೂಡ ಕಾರಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಕಾಡಿಗೆ ಓಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.