ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ತಾಲೂಕಿನ ಶಿರಸಿ ಯಲ್ಲಾಪುರ ಮಾರ್ಗಮಧ್ಯೆಯ ಯರಕನಬೈಲ್ ಎಂಬಲ್ಲಿ ತೋಟಕ್ಕೆ ಬೆಂಕಿ ಬಿದ್ದು ಅಪಾರಪ್ರಮಾಣದ ನಷ್ಟ ಉಂಟಾಗಿದೆ.

ಸೋಮವಾರ ಸಂಜೆ ಹೊತ್ತಿಗೆ ಯರಕನಬೈಲಿನ ಈಶ್ವರ ಪಾಟಣಕರ್ ಎಂಬವರ ತೋಟದಲ್ಲಿ ಧಗಧಗಿಸುವ ಅಗ್ನಿಜ್ವಾಲೆ ಎದ್ದಿದೆ.ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದೇ ಬೆಂಕಿಹೊತ್ತಿಕೊಳ್ಳಲು ಕಾರಣವೆನ್ನಲಾಗಿದೆ.ಸುಮಾರು ೩೦೦ ರಷ್ಟು ಅಡಿಕೆ ಗಿಡ,ಮರ,೬೦ ರಷ್ಟು ತೆಂಗಿನ ಗಿಡ,ಮರ, ಹತ್ತು ಟನ್ ಆಗುವಷ್ಟುಕಟಾವಿಗೆ ಬಂದಿರುವ ಕಬ್ಬು,ಬಾಳೆ ಜೊತೆಗೆ ಮಾವಿನಗಿಡಗಳು ಬೆಂಕಿಗೆ ಆಹುತಿಯಾಗಿದೆ.ಜೊತೆಗೆ ಕೃಷಿ ಪರಿಕರಗಳು ಬೆಂಕಿಗಾಹುತಿಯಾಗಿದೆ.ಬೆಂಕಿ ನಿಯಂತ್ರಣ ಸಾಧ್ಯವಾಗದೇ ಹೋದಾಗ ನಂತರ ಸ್ಥಳಕ್ಕೆ ಅಗ್ನಿಶಾಮಕದವರು ಧಾವಿಸಿ ಬೆಂಕಿಯನ್ನು ಆರಿಸುವಲ್ಲಿ ಸಫಲರಾದರು.ಒಂದೆಡೆ ಉರಿ ಸೆಖೆ,ಇನ್ನೊಂದೆಡೆ ಬೆಂಕಿಯ ಜ್ವಾಲೆ.ಹತ್ತಿರವೆಲ್ಲೂ ಈ ಪ್ರದೇಶದಲ್ಲಿ ಸುಳಿಯುವಂತಿಲ್ಲ.ಸಂಬಂದಿಸಿದ ಅಧಿಕಾರಿಗಳು ಸ್ಥಳ ಭೇಟಿನೀಡಿ ಹಾನಿಯನ್ನು ಅಂದಾಜಿಸಬೇಕಿದೆ.