ಸುದ್ದಿಕನ್ನಡ ವಾರ್ತೆ
ಕೊಪ್ಪಳ: ಮಹಾಶಿವರಾತ್ರಿಯ ಪ್ರಯುಕ್ತ ಕಲ್ಯಾಣ ಕರ್ನಾಟಕದ ಹಣ್ಣಿನ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯಲ್ಲಿ ಎಲ್ಲ ಬಗೆಯ ಹಣ್ಣುಗಳನ್ನು ಸವಿಯಲು ಗ್ರಾಹಕರಿಗೆ ಅನುಕೂಲವಾಗಲು ಕೊಪ್ಪಳ ತೋಟಗಾರಿಕಾ ಇಲಾಖೆ ಹಣ್ಣು ಮತ್ತು ಜೇನು ಮೇಳ 2025 ನ್ನು ಆಯೋಜಿಸಿದೆ. ಈ ಮೇಳದಲ್ಲಿ ಜಪಾನಿನಲ್ಲಿ ಬೆಳೆಯುವ “ರೂಬಿ ರೋಮನ್” ದ್ರಾಕ್ಷಿ ಪ್ರದರ್ಸನ ಅತ್ಯಂತ ಆಕರ್ಷಣೆ ಪಡೆದಿದೆ. ಈ ದ್ರಾಕ್ಷಿ ಪ್ರತಿ ಕೆ.ಜಿಗೆ 8 ಲಕ್ಷ ರೂ ಆಗಿದೆ. (The “Ruby Roman” grape is the most attractive of the show. These grapes cost Rs 8 lakh per kg.)
ರೂಬಿ ರೋಹನ್ ದ್ರಾಕ್ಷಿ ಇದು ಜಗತ್ತಿನ ಅತ್ಯಂತ ದುಬಾರಿ ದ್ರಾಕ್ಷಿಯಾಗಿದೆ. ರೂಬಿ ರೋಮನ್ ಮೂಲತಃ ಜಪಾನ್ ಮೂಲದ್ದು. ಈ ಪ್ರದರ್ಶನದಲ್ಲಿ ಇದು ಪ್ರಮುಖ ಆಕರ್ಷಣೆಯಾಗಿದೆ. ಜಪಾನಿನಲ್ಲಿ ಬೆಳೆಯುವ ಈ ದ್ರಾಕ್ಷಿ ಹಣ್ಣಿನ ಮೌಲ್ಯ ಪ್ರತಿ ಕೆ.ಜಿಗೆ 8 ಲಕ್ಷ ರೂ ಆಗಿದೆ. ದ್ರಾಕ್ಷಿ ಬೆಳೆಯುವ ರೈತರ ಮಾಹಿತಿಗಾಗಿ ಈ ದುಬಾರಿ ರೂಬಿ ರೋಮನ್ ದ್ರಾಕ್ಷಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ದ್ರಾಕ್ಷಿ ಬೆಳೆಗಾರರು ಉತ್ಸಾಹದಿಂದ ಈ ರೂಬಿ ರೋಮನ್ ದ್ರಾಕ್ಷಿಯ ಮಾಹಿತಿ ಪಡೆಯುತ್ತಿದ್ದಾರೆ.
ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಪ್ಪಳ ತೋಟಗಾರಿಕೆ ಇಲಾಖೆಯ ವತಿಯಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಇಲ್ಲಿ ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯಿ, ಹಲಸು, ಅಣಬೆ, ಜೇನುತುಪ್ಪ ಪ್ರದರ್ಶನ ಮತ್ತು ಮಾರಾಟವನ್ನು ಸಹ ಆಯೋಜಿಸಲಾಗಿದೆ.