ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ ನದಿಗಳನ್ನು ಬಳಸಿಕೊಂಡು ವಾಟರ್ ಮೆಟ್ರೊ ಆರಂಭಿಸಲು ಅಭ್ಯಾಸ ಆರಂಭಿಸಲಾಗಿದೆ. ಭಾರತೀಯ ಅಂತರ್ಗತ ಜಲಮಾರ್ಗ ಪ್ರಾಧಿಕಾರ (IWAI ) ಸಂಚಾಲನ ಮಂಡಳವು ನಡೆಸಿದ 196 ನೇಯ ಬೈಠಕ್ ನಲ್ಲಿ ದೇಶದ ವಿವಿಧ ಶಹರಗಳಲ್ಲಿ ವಾಟರ್ ಮೆಟ್ರೊ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಭ್ಯಾಸ ಆರಂಭಿಸು ನಿರ್ಣಯ ತೆಗೆದುಕೊಳ್ಳಲಾಗಿದ್ದು ಇದರಲ್ಲಿ ಗೋವಾ ರಾಜ್ಯ ಕೂಡ ಒಳಗೊಂಡಿದೆ.
ಮಂಡಳವು ದೇಶದಲ್ಲಿ 12 ರಾಜ್ಯಗಳಲ್ಲಿನ 17 ಶಹರಗಳಲ್ಲಿ ಜಲ ಮೆಟ್ರೊ ಆರಂಭಿಸುವ ನಿಟ್ಟಿನಲ್ಲಿ ಅಭ್ಯಾಸ ನಡೆಸುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕುರಿತು ಅಭ್ಯಾಸ ನಡೆಸಲು ಕೋಚಿ ಮೆಟ್ರೊ ರೈಲ್ವೆ ಕಂಪನಿಯನ್ನು ನಿಯುಕ್ತಿಗೊಳಿಸಲಾಗಿದೆ.
IWAI ಗೋವಾ ಸೇರಿದಂತೆ, ಅಯೋಧ್ಯಾ,ಕೊಲ್ಕತ್ತ, ಪ್ರಯಾಗರಾಜ್, ಪಾಟ್ನಾ, ಶ್ರೀನಗರ, ವಾರಣಾಸಿ, ಮುಂಬಯಿ,ವಸಯಿ, ಮಂಗಳೂರು, ಅಹಮದಾಬಾದ್ ಗಳಲ್ಲಿಯೂ ವಾಟರ್ ಮೆಟ್ರೊ ಯೋಜನೆ ಆರಂಭಿಸುವ ಕುರಿತು ಅಭ್ಯಾಸ ನಡೆಸಲು ಮುಂದಾಗಿದೆ.
ಇದರಿಂದಾಗಿ ಗೋವಾದಲ್ಲಿ ಮುಂಬರುವ ದಿನಗಳಲ್ಲಿ ವಾಟರ್ ಮೆಟ್ರೊ ಗೋವಾದಲ್ಲಿಯೂ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದೇ ಹೇಳಲಾಗುತ್ತಿದೆ. ಗೋವಾ ರಾಜ್ಯ ಒಂದು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಗೋವಾದಲ್ಲಿ ವಾಟರ್ ಮೆಟ್ರೊ ಆರಂಭಗೊಂಡಲ್ಲಿ ಹೆಚ್ಚಿನ ಆಕರ್ಷಣೆಗೂ ಕಾರಣವಾಗಲಿದೆ.