ಸುದ್ದಿ ಕನ್ನಡ ವಾರ್ತೆ
ಚಿಕ್ಕೋಡಿ: ರಾತ್ರಿ ಹೊತ್ತು ವಿದ್ಯುತ್ ಕಡಿತ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಫೆ 24 ರಂದು ಹುಬ್ಬಳ್ಳಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ರೈತರು ನಿರ್ಧರಿಸಿದ್ದಾರೆ.
ರೈತ ಸಂಘ ಮತ್ತು ಹಸಿಎಉ ಸೇನೆ ಸಂಘದ ಸದಸ್ಯರು ಮತ್ತು ಪ್ರಗತಿಪರ ರೈತರು ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟ್ ಬಳಿ ಪೂರ್ವಭಾವಿ ಸಭೆ ನಡೆಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲು ಸರ್ವಸಮ್ಮತ ನಿರ್ಧಾರ ಕೈಗೊಂಡರು.
ರಾಜ್ಯ ರೈತ ಸಂಘದ ಅಧ್ಯಕ್ಣ ಚುನಾಪ್ಪ ಪೂಜೇರಿ ಮಾತನಾಡಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ರಾಜ್ಯ ಸರ್ಕಾರ ಯಡುವಿದೆ. ವಿದ್ಯುತ್ ಕಡಿತ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಫೆ.24 ರಂದು ಚಿಕ್ಕೋಡಿ ತಾಲೂಕಿನ ಬೆಳಕೂಡ. ಉಮರಾಣಿ. ನಾಗರಮುನ್ನೋಳ್ಳಿ ಸೇರಿದಂತೆ ಸುಮಾರು 300 ಅಧಿಕ ರೈತರು ಹುಬ್ಬಳ್ಳಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ. ಇಂದಿನ ಸಚಿವ ಜಾರ್ಜ್ ಅವರು ಪ್ರತಿಭಟನಾ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ರಾಜಕುಮಾರ ಜಂಬಗಿ . ಜಿಲ್ಲಾ ಸಂಚಾಲಕರು ವಾಸು ಪಂಡ್ರೋಳಿ. ಸಿದ್ರಾಮ ಸನದಿ. ಗೋಕಾಕ ಮುಖಂಡರು ಮಾದೇವ ಹುಳಕರ. ಹುಬ್ಬಳ್ಳಿ ಕೆಓಎಪ್ ನಿರ್ದೇಶಕ ಪ್ರಭು ಡಬ್ಬನ್ನವರ. ರೈತರಾದ ಬಸವಣ್ಣಿ ಪಾಶ್ಚಾಪೂರೆ. ಆನಂದ ಪಾಶ್ಚಾಪೂರೆ. ಮುರಿಗೇಪ್ಪ ಅಡಿಸೇರಿ. ಅರ್ಜುನ ಕಮತೆ. ಬಸವಣ್ಣಿ ಕಬ್ಬೂರೆ ಮುಂತಾದವರು ಇದ್ದರು.