ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಗುಳ್ಳಾಪುರದಲ್ಲಿ ಫೆಬ್ರುವರಿ 23 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಗುಳ್ಳಾಪುರದ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಶ್ರೀ ಚಾಮುಂಡೇಶ್ವರಿ ಯುವಕ ಸಂಘದ ವತಿಯಿಂದ ರಕ್ತದಾನ ಶಿಭಿರವನ್ನು ಆಯೋಜಿಸಲಾಗಿದೆ.
ರಕ್ತದಾನವು ಒಂದು ಶ್ರೇಷ್ಠದಾನವಾಗಿದೆ. ಒಂದು ಹನಿ ರಕ್ತದಿಂದ ಒಂದು ಜೀವವನ್ನೇ ಉಳಿಸಬಹುದಾಗಿದೆ. ಇದರಿಂದಾಗಿ ಈ ರಕ್ತದಾನ ಶಿಭಿರದಲ್ಲಿ ಹೆಚ್ಚು ಜನರು ಪಾಲ್ಗೊಂಡು ರಕ್ತದಾನ ಮಾಡಬೇಕೆಂದು ಶ್ರೀ ಚಾಮುಂಡೇಶ್ವರಿ ಯುವಕ ಸಂಘ(ರಿ) ಪ್ರಕಟಣೆಯಲ್ಲಿ ಕೋರಿದೆ.