ಸುದ್ದಿ ಕನ್ನಡ ವಾರ್ತೆ

ಬಂಕಾಪುರ:ತಾಲೂಕಿನ ಬಂಕಾಪುರ ತೋಳಧಾಮದಲ್ಲಿ ಕಳೆದ ತಿಂಗಳಷ್ಟೇ ಎರಡು ತೋಳಗಳು ಒಟ್ಟು 14 ಮರಿಗಳಿಗೆ ಜನ್ಮ ನೀಡಿ ಅಳಿವಿನಂಚಿನಲ್ಲಿರುವ ತೋಳಗಳ ಸಂತತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್ ತೋಳಧಾಮಕ್ಕೆ ಭಾನುವಾರ ಭೇಟಿ ವಿಕ್ಷಣೆ ಮಾಡಿದರು.

ಸುಮಾರು 337 ಹೆಕ್ಟರ್ ಪ್ರದೇಶದಲ್ಲಿ ತಾಲೂಕಿನ ಬಂಕಾಪುರ ಗ್ರಾಮ ಪಕ್ಕದ ಗುಡ್ಡಗಾಡು ಪ್ರದೇಶವನ್ನು ರಾಜ್ಯದ ಮೊದಲ ತೋಳಧಾಮ ಎಂದು ಸರಕಾರ ಘೋಷಿಸಿದ್ದು, ಇಲ್ಲಿ ನಾನಾ ಬಗೆಯ ಪ್ರಾಣಿಗಳ ಜತೆಗೆ ರಾಜ್ಯದಲ್ಲಿಯೇ ಅತೀ ಹೆಚ್ಚು 35ರಿಂದ 40 ತೋಳಗಳಿವೆ ಎಂದು ತಿಳಿದು ಬಂದಿದೆ. ಈ ತೋಳಧಾಮದಲ್ಲಿ ಕಳೆದ ತಿಂಗಳು ತೋಳವೊಂದು 6 ಮರಿಗಳಿಗೆ ಜನ್ಮನೀಡಿತ್ತು. ಮರಿಗಳೊಂದಿಗೆ ತಾಯಿ ತೋಳವಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ 4-5 ದಿನಗಳಲ್ಲಿ ಮತ್ತೊಂದು ತೋಳವು 5 ಮರಿಗಳಿಗೆ ಜನ್ಮ ನೀಡಿದ್ದು, ತಡವಾಗಿ ಬೆಳಕಿಗೆ ಬಂದಿತ್ತು ಇದನ್ನು ಸ್ವತಃ ಇಲಾಖೆಯ ಸಚಿವ ಈಶ್ವರ ಖಂಡ್ರೆ ಮಾಹಿತಿ ಹಂಚಿಕೊಂಡಿದ್ದರಿಂದ ಬಂಕಾಪುರ ತೋಳಧಾಮವು ಪ್ರಸಿದ್ಧಿ ಪಡೆಯುತ್ತಿದೆ ತೋಳಗಳ ರಕ್ಷಣೆ ಜತೆಗೆ ಆಹಾರ ಸರಪಳಿ ನಿರ್ಮಾಣಕ್ಕಾಗಿ ಇಲಾಖೆಯು ನಾನಾ ಕ್ರಮಗಳನ್ನು ಧಾಮದಲ್ಲಿ ಕೈಗೊಂಡಿದ್ದರಿಂದ ಭಾನುವಾರ ಜಿಲ್ಲಾಧಿಕಾರಿ ನಲಿನ್ ಅತುಲ್ ಕ್ಯಾಮೆರಾ ಜತೆ ಭೇಟಿ ನೀಡಿ ತೋಳವಿದ್ದ ಗುಹೆಯ ಬಳಿ ಕಾದಿದ್ದಾರೆ. ಆದರೆ, ತೋಳಗಳು ಕಾಣದಿದ್ದರಿಂದ ಡಿಸಿ ನಿರಾಸೆಗೊಂಡರು ಇದರಿಂದ ಧಾಮದಲ್ಲಿ ಕೈಗೊಂಡ ಕ್ರಮಗಳನ್ನು ವೀಕ್ಷಿಸಿ ಆರ್‌ಎಫ್‌ಒ ಸುಭಾಷಚಂದ್ರ ಜತೆ ಚರ್ಚಿಸಿ ವಾಪಾಸ್ ಕೊಪ್ಪಳಕ್ಕೆ ತೆರಳಿದರು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಅರಣ್ಯ ಇಲಾಖೆಯ ಶ್ರೀನಿವಾಸ ಇದ್ದರು.

ತೋಳ ಸಾವು : ಧಾಮದಲ್ಲಿ ಸತತ ತೋಳಗಳ ಜನನದಿಂದ ಸಂತಸದಲ್ಲಿದ್ದ ಅರಣ್ಯ ಇಲಾಖೆಯವರಿಗೆ ಭಾನುವಾರ ತೋಳವೊಂದು ಸಾವನ್ನಪ್ಪಿರುವುದು ಬೇಸರ ಮೂಡಿದೆ. ತಿರುಗುತ್ತಜಿಲ್ಲಾಧಿಕಾರಿಗಳು ತೋಳವನ್ನು ವೀಕ್ಷಿಸಿದರು. ಸತ್ತ ತೋಳದ ಕಳೆಬರಹವನ್ನು ಭಾನುವಾರ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದರು
7 ವರ್ಷದ ಗಂಡು ತೋಳವೊಂದು ಚಿರೆತೆಯೊಂದಿಗಿನ ಕಾದಾಟ ಇಲ್ಲವೇ, ತೋಳಗಳ ನಡುವಿನ ಕಾದಾಟದಲ್ಲಿ ಸಾವನ್ನಪ್ಪಿದ್ದು, ಜಿಲ್ಲಾಧಿಕಾರಿಗಳು ವೀಕ್ಷಣೆ ಮಾಡಿದ್ದಾರೆ ಎಂದು ಆರ್ ಎಫ್ ಒ ಸುಭಾಷಚಂದ್ರ ತಿಳಿಸಿದರು ತಹಸೀಲ್ದಾರ್ ವಿಶ್ವನಾಥ ಮುರಡಿ ಇದ್ದರು.
17ಕೆಎನ್‌ಕೆ01
ಕನಕಗಿರಿಯ ಬಂಕಾಪುರ ತೋಳಧಾಮದಲ್ಲಿ ಅಧಿಕಾರಿಗಳೊಂದಿಗೆ ಡಿಸಿ ಡಿಸಿ ನಲಿನ್ ಅತುಲ್ ಭಾನುವಾರ ಚರ್ಚಿಸಿದರು.