ಸುದ್ದಿ ಕನ್ನಡ ವಾರ್ತೆ
ಬೆಳಗಾವಿ:ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದ ಗಣ್ಯ ಮನೆತನದ, ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕವಿ, ಕಲಾವಿದ, ಪತ್ರಕರ್ತ, ಸಮಾಜ ಸೇವಕ ಶ್ರೀ ಮಹಾಂತೇಶ ಶಿವಪ್ಪ ಮುದಕನಗೌಡರ ಅವರು ನಾಡಿನ ಹೆಮ್ಮೆಯ ಕನ್ನಡದ ಶಕ್ತಿ ಕೇಂದ್ರ , ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಆಜೀವ ಸದಸ್ಯರಾದ ನಿಮಿತ್ತ ಮತ್ತು ಕೇಂದ್ರ ಬಸವ ಸಮಿತಿಯ ಬಸವಪಥ ಸದಸ್ಯರಾದ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಮೋಹನ ಬಸನಗೌಡ ಪಾಟೀಲ ಅವರು ವಚನ ಗ್ರಂಥ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘವು ಮುದ್ರಿಸಿದ 2025ರ ಕನ್ನಡ ಅಂಕಿಗಳುಳ್ಳ ದಿನದರ್ಶಿಕೆಯನ್ನು ನೀಡಿ ಗೌರವಿಸಿ, ಅಭಿನಂದಿಸಿದರು.