ಸುದ್ದಿ ಕನ್ನಡ ವಾರ್ತೆ

ಕಾರವಾರ: ಕಳೆದ ವರ್ಷ ಅಗಸ್ಟ್ 7 ರಂದು ಕುಸಿದು ಬಿದ್ದಿದ್ದ 45 ವರ್ಷದಷ್ಟು ಹಳೆಯದಾದ ಕಾಳಿ ನದಿ ಸೇತುವೆ ಅವಶೇಷತೆಗೆಯುವಾಗ ಶುಕ್ರವಾರ ಬೆಳಗ್ಗಿನ ಜಾವ ಭಾರಿ ಅವಘಡ ಸಂಭವಿಸಿದೆ.

ಈ ಹಳೆಯ ಸೇತುವೆ ಕತ್ತರಿಸುವಾಗ ಪಿಲ್ಲರ್ ಒಂದು ಭಾಗ ಕುಸಿದು ಸ್ಲಾಬ್ ಮೇಲೆ ಎದ್ದಿದೆ. ಇದೀಗ ಹೊಸ ಸೇತುವೆಗೆ ಧಕ್ಕೆಯಾಗದಂತೆ ಈ ಸ್ಲಾಬ್ ಅನ್ನು ಸುರಕ್ಷಿತವಾಗಿ ಕತ್ತರಿಸುವುದು ಸವಾಲಿನ ಕೆಲಸವಾಗಿದೆ.

ಈ ಕಾಳಿ ನದಿ ಹಳೆಯ ಸೇತುವೆಯ ಶೇಕಡ ಎಪ್ಪತ್ತರಷ್ಟು ಅವಶೇಷ ತೆರವು ಮಾಡಲಾಗಿದೆ. ಇನ್ನುಳಿದ ಭಾಗಗಳ ತೆರವು ಕಾರ್ಯ ಭ ರದಿಂದ ನಡೆಯುತ್ತಿದೆ. ಶುಕ್ರವಾರ ಬೆಳಗಿನ ಜಾವ ಈ ಕಾರ್ಯಾಚರಣೆಯ ವೇಳೆ ಅವಘಡ ಸಂಭವಿಸಿದೆ.