ಸುದ್ದಿ ಕನ್ನಡ ವಾರ್ತೆ

ಕಂಪ್ಲಿ- ಕಂಪ್ಲಿ ತಾಲೂಕಿನ ಕಣಿವಿ ತಿಮ್ಮಾಪುರ ಗ್ರಾಮದಲ್ಲಿ ಈ ಶಾಸನವನ್ನು ಸಹಾಯಕ ಪ್ರಾಧ್ಯಾಪಕ ತಳವಾರ ನರಸಿಂಹ ಅವರು ಪತ್ತೆ ಹಚ್ಚಿದ್ದಾರೆ.

ಇದು ವಿಜಯನಗರ ಕಾಲದ ಶಾಸನವಾಗಿದ್ದು ಇದರ ಕಾಲ ಸಾಮಾನ್ಯ ಶಕ 1516 ಎಂದು ತಳವಾರ ನರಸಿಂಹ ಅವರು ಗುರುತಿಸಿದ್ದಾರೆ. ಇದು ಶ್ರೀ ಕೃಷ್ಣದೇವರಾಯನ ಕಾಲದ ಶಾಸನವಾಗಿದೆ ಶಾಸನವನ್ನು ಕನ್ನಡ ಲಿಪಿ ಯಲ್ಲಿ ಬರೆಯಲಾಗಿದೆ ಆದರೆ ಶಾಸನದ ಭಾಷೆ ತೆಲುಗು ಆಗಿದೆ. ಮೇಲ್ಭಾಗದಲ್ಲಿ 18 ಸಾಲುಗಳು ಹಾಗೂ ಎಡಬಾಗದ ಅಂಚಿನಲ್ಲಿ 2 ಸಾಲುಗಳಿಂದ ಕೂಡಿದೆ ಹಾಗೂ ಮೇಲ್ನೋಟಕ್ಕೆ ಈ ಶಾಸನವು ದಾನ ಶಾಸನ ಎಂಬಂತೆ ಗೋಚರಿಸುತ್ತಿದೆ ಎಂದು ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕುಲಪತಿಗಳಾದ ಡಾ. ಪರಮಶಿವಮೂರ್ತಿ ಯವರು ಈ ಶಾಸನ ತೆಲುಗು ಭಾಷೆ ಯಲ್ಲಿದೆ ಹೆಚ್ಚಿನ ಅಧ್ಯಯನ ಮಾಡಲು ಸ್ಥಳಕ್ಕೆ ಬರುವುದಾಗಿ ತಿಳಿಸಿದ್ದಾರೆ ಮತ್ತು ಮೈಸೂರಿನ ಕೇಂದ್ರ ಪುರಾತತ್ವ ಇಲಾಖೆಯ ಶಾಸನ ತಜ್ಞ ಡಾ. ನಾಗರಾಜಪ್ಪ ಇವರು ಶಾಸನ ಪಡಿಯಚ್ಚು ತೆಗೆದುಕೊಟ್ಟಿದ್ದಾರೆ ಹೆಚ್ಚಿನ ಅಧ್ಯಯನ ಮಾಡುತ್ತಿದ್ದಾರೆ.

ತಳವಾರ್ ನರಸಿಂಹ ಅವರು ಈ ಶಾಸನದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡುತ್ತಿದ್ದೇವೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ. ಶಾಸನ ಪತ್ತೆ ಹಚ್ಚುವಲ್ಲಿ ಯಲ್ಲಪ್ಪ, ನಾಗರಾಜ್ ಮತ್ತು ಮಾರಪ್ಪ ಮತ್ತು ಗ್ರಾಮಸ್ಥರ ಸಹಾಯವನ್ನು ಸ್ಮರಿಸಿದ್ದಾರೆ.

11-ಕಂಪ್ಲಿ-1-ಮತ್ತು-2- ಕಂಪ್ಲಿ ತಾಲ್ಲೂಕಿನ ಕಣವಿ ತಿಮ್ಮಾಪುರದ ಭತ್ತದ ಗದ್ದೆಯಲ್ಲಿ ಪತ್ತೆಯಾದ ಶ್ರೀಕೃಷ್ಣದೇವರಾಯನ ಕಾಲದ ಶಿಲಾ ಶಾಸನ ಹಾಗೂ ಸಹಾಯಕ ಪ್ರಧಯಾಪಕ ತಳವರ ನೆಯ ಸಿಂಹ ಮತ್ತು ಇತರರು.