ಸುದ್ದಿಕನ್ನಡ ವಾರ್ತೆ
Goa: ಕಳೆದ ಕೆಲವು ದಿನಗಳಿಂದ ಗೋವಾ ರಾಜ್ಯದಲ್ಲಿ ಚಳಿ ಕಡಿಮೆಯಾಗಿದ್ದು, ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಸೋಮವಾರ ಪಣಜಿಯಲ್ಲಿ ಗರಿಷ್ಠ 35.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ರಾಜ್ಯದ ಮುಗಾರ್ಂವ್ನಲ್ಲಿ ಗರಿಷ್ಠ ತಾಪಮಾನ 34.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುಂದಿನ ಆರು ದಿನಗಳವರೆಗೆ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ಮುಂದುವರಿಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಗೋವಾ ರಾಜ್ಯ ಹವಾಮಾನ ಇಲಾಖೆಯ ಸ್ವಯಂಚಾಲಿತ ಕೇಂದ್ರದ ದಾಖಲೆಗಳ ಪ್ರಕಾರ, ಸಾಳ್ಗಾಂವ್ನಲ್ಲಿ ಗರಿಷ್ಠ ತಾಪಮಾನ 36.1 ಡಿಗ್ರಿ ಸೆಲ್ಸಿಯಸ್, ಮೋಪಾನಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಮತ್ತು ಪೆಡ್ನೆಯಲ್ಲಿ 35.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಸೋಮವಾರ ಪಣಜಿಯಲ್ಲಿ ಕನಿಷ್ಠ ತಾಪಮಾನ 22.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಮುಗಾರ್ಂವ್ನಲ್ಲಿ ಕನಿಷ್ಠ ತಾಪಮಾನ 22.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಸಾಳ್ಗಾಂವ್ನಲ್ಲಿ ಕನಿಷ್ಠ 21.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಫೆಬ್ರವರಿ 11 ರಿಂದ 14 ರವರೆಗೆ ರಾಜ್ಯದಲ್ಲಿ ಹವಾಮಾನವು ಶುಷ್ಕವಾಗಿರುತ್ತದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಬೆಳಿಗ್ಗೆ ಮತ್ತು ಸಂಜೆ ಮಂಜು ಕವಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ಕೆಲ ದಿನಗಳಿಂದ ಗೋವಾ ರಾಜ್ಯಾದ್ಯಂತ ದಿಡೀರ್ ತಾಪಮಾನ ಹೆಚ್ಚಳವಾಗಿದ್ದು, ತಾಪಮಾನ ಹೆಚ್ಚಳದಿಂದ ಜನತೆ ಹೈರಾಣಾಗಿದ್ದಾರೆ. ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಳವಾಗುವುದರಿಂದ ಜನತೆ ಹೆಚ್ಚಿನ ತೊಂದರೆ ಅನುಭವಿಸುವಂರಾಗಲಿದೆ.