ಸುದ್ಧಿಕನ್ನಡ ವಾರ್ತೆ
ಶಿರಸಿ: ಅರಣ್ಯವಾಸಿಗಳ ಕಾನೂನಾತ್ಮಕ ಜ್ಞಾನದ ಮೌಲ್ಯವನ್ನ ವೃದ್ಧಿಸುವ ಮತ್ತು ಜಾಗೃತೆ ಮಾಡುವ ಉದ್ದೇಶದಿಂದ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಫೆಬ್ರವರಿ ೧೫ ರಿಂದ ಪ್ರಾರಂಭವಾಗಲಿರುವ ರಾಜ್ಯಮಟ್ಟದ ಅರಣ್ಯವಾಸಿಗಳ ಕಾನೂನು ಜಾಗೃತ ಜಾಥಾ-೨೦೨೫ ರ ಲಾಂಛನವನ್ನು ವಿಶ್ರಾಂತ ನ್ಯಾಯಮೂರ್ತಿ ಎನ್.ಎಚ್.ನಾಗಮೋಹನದಾಸ್ ಅವರು ಬಿಡುಗಡೆಗೊಳಿಸಿದ್ದರು.
ಅವರು ಮಂಗಳವಾರ ಬೆಂಗಳೂರಿನ ಕಛೇರಿಯಲ್ಲಿ ಲಾಂಛನ ಕಾರ್ಯಕ್ರಮ ನೇರೆವೆರಿಸಿದರು.
ಹೋರಾಟಗಾರ ಏ.ರವೀಂದ್ರ ನಾಯ್ಕ ಮಾತನಾಡಿ
ರಾಜ್ಯಾದಂತ ೧೬ ಜಿಲ್ಲೆಯ ವಿವಿಧ ೫೦೦ ಸ್ಥಳಗಳಲ್ಲಿ ಅರಣ್ಯವಾಸಿಗಳ ಕಾನೂನು ಜಾಗೃತ ಕಾರ್ಯಕ್ರಮ ಜರುಗಲಿದ್ದು ಕಾನೂನು ಅಡಿಯಲ್ಲಿ ವೈಯಕ್ತಿಕ ನಿರ್ದಿಷ್ಟ ದಾಖಲಾತಿ ಅವಶ್ಯಕತೆವಿಲ್ಲದಿರುವದು, ಮಂಜೂರಿಗೆ ಸಾಂಧರ್ಬಿಕ ದಾಖಲೆಗಳ ಮಾಹಿತಿ, ಕಾನೂನು ಭಾಹಿರ ಅರ್ಜಿ ತಿರಸ್ಕಾರಕ್ಕೆ ಕಡಿವಾಣ, ಅಸಮರ್ಪಕ ಜಿಪಿಎಸ್‌ಗೆ ಕಾನೂನು ಪರಿಹಾರ, ಅರಣ್ಯವಾಸಿಗೆ ಕಾನೂನಿನಲ್ಲಿ ಬದುಕುವ ಹಕ್ಕಿನ ಮಾಹಿತಿ ಅಂಶಗಳನ್ನು ಹೊಂದಿದೆ ಎಂದು ಹೇಳಿದರು.
ವಿಶ್ರಾಂತ್ರ ನ್ಯಾಯಮೂರ್ತಿ ಎಚ್ .ಎನ್ ನಾಗಮೋಹನದಾಸ್,
ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ಅವಶ್ಯ. ಕಾನೂನು ಅಜ್ಞಾನದಿಂದ ಭೂಮಿ ಹಕ್ಕಿನಿಂದ ಅರಣ್ಯವಾಸಿಗಳು ವಂಚಿತರಾಗಬಾರದು. ಹೋರಾಟದ ಜೊತೆಯಲ್ಲಿ ಅರಣ್ಯವಾಸಿಗಳಿಗೆ ಕಾನೂನು ಜ್ಞಾನ ನೀಡುವುದು ಸ್ಲಾಘನೀಯ ಕಾರ್ಯ ಎಂದರು.
ಮಾನವ ಬಂಧು ವೇದಿಕೆಯ ಪ್ರಮಖುರು ಹಾಗೂ ಹಿರಿಯ ನ್ಯಾಯಾವಾದಿ ಅನಂತ ನಾಯ್ಕ, ಕಿಗ್ಗ್ ನಾಗರಾಜ, ನ್ಯಾಯಾವಾದಿ ಶ್ರೀಹರಿ, ಮೋಹನ ಕುಮಾರ ಇತರರು ಉಪಸ್ಥಿತರಿದ್ದರು.