ಸುದ್ದಿ ಕನ್ನಡ ವಾರ್ತೆ
ಶಿರಸಿ : ತಾಲೂಕಿನ ಬನವಾಸಿ ವಲಯಾರಣ್ಯ ವ್ಯಾಪ್ತಿಯ ಶಿವಳ್ಳಿ ಗ್ರಾಮ ಅರಣ್ಯ ಸ.ನo. 139 ರಲ್ಲಿ ಅಕ್ರಮವಾಗಿ ಸಾಗವಾನಿ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ್ ಅವರು ಡಿ ಎಫ್ ಓ ಅಜ್ಜಯ್ಯ ಹಾಗೂ ಎಸಿಏಫ್ ಎಸ್. ಎಸ್. ನಿಂಗಾಣಿ ಮಾರ್ಗದರ್ಶನದಲ್ಲಿ ಸೋಮವಾರ ದಾಳಿ ಮಾಡಿ 4 ಸಾಗವಾನಿ ತುಂಡುಗಳ ಸಹಿತ ಆರೋಪಿಗಳನ್ನು ವಶಕ್ಕೆ ತೆಗೆದು ಕೊಂಡಿದ್ದಾರೆ. ಶಿವಳ್ಳಿ ಗ್ರಾಮ ಕುದರಮನೆಯ ಮಂಜುನಾಥ ಕೃಷ್ಣ ಮೊಗೇರ, ಕೃಷ್ಣ ರಾಮಚಂದ್ರ ಪಟಗಾರ ಮತ್ತು ದಾಸನಕೊಪ್ಪದ ಶಾಂತಪ್ಪ ರಾಮಣ್ಣ ತಳವಾರ ಬಂಧಿತ ಆರೋಪಿಗಳಾಗಿದ್ದಾರೆ.