ಸುದ್ಧಿಕನ್ನಡ ವಾರ್ತೆ
ಪಣಜಿ: ತನ್ನ ಹಸಿವು8 ನೀಗಿಸಿಕೊಳ್ಳಲು ಅನ್ನ ಹುಡುಕಿಕೊಂಡು ಬರುತ್ತಿದ್ದ ನಾಯಿ ಮರಿಗಳಿಗೆ ವಿಷ ಹಾಕಿ ಕೊಂದ ಘಟನೆ ಗೋವಾದ ಪೊಂಡಾ-ಕುಂಡಯಿ ಮಹಾಲಾಸಾ ಮಥುರಾಮ್ ಸೊಸೈಟಿ ಕಟ್ಟಡದ ಬಳಿ ನಡೆದಿದೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಈ ಕುರಿತು ನಳಿನಿ ನಾಯ್ಕ ದೂರು ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ನಾಯಿ ಮರಿಗಳು ಈ ಸೊಸೈಟಿ ಪರಿಸರದಲ್ಲಿ ಅನ್ನ ಹುಡುಕುತ್ತಾ ಬರುತ್ತಿದ್ದವು. ಕೆಲವರು ಈ ನಾಯಿ ಮರಿಗಳಿಗೆ ಅನ್ನ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಮೂರು ಜನರು- ಈ ನಾಯಿಗಳನ್ನು ಸೊಸೈಟಿಗೆ ಏಕೆ ತರುತ್ತೀರಿ…? ಈ ನಾಯಿಮರಿಗಳನ್ನು ಸಾಯಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಆದರೆ ಈ ಘಟನೆಗೆ ಸಂಬಂಧಿಸಿದಂತೆ ನಾಯಿ ಮರಿಗಳ ಮರಣೋತ್ತರ ಪರೀಕ್ಷಾ ವರದಿ ಬರುವ ವರೆಗೂ ದೂರು ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಈ ಕೃತ್ಯವನ್ನು ಜನತೆ ಖಂಡಿಸಿದ್ದು, ಮೂಕಪ್ರಾಣಿಗಳನ್ನು ಹತ್ಯೆ ಮಾಡುವ ಇಂತವರಿಗೆ ಶಿಕ್ಷೆಯಾಗಬೇಕು ಎಂದು ಆಘ್ರಹಿಸಿದ್ದಾರೆ.