ಸುದ್ದಿಕನ್ನಡ ವಾರ್ತೆ
Goa : ಮುಖ್ಯಮಂತ್ರಿ ದೇವದರ್ಶನ ಯೋಜನೆಯಡಿ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಗೋವಾ ರಾಜ್ಯದ ಜನತೆಗೆ ಉಚಿತ ರೈಲು ಸೇವೆ ವ್ಯವಸ್ಥೆ ಮಾಡಿದೆ.
ಗೋವಾದಿಂದ ಪ್ರಯಾಗರಾಜ್ ಗೆ ಈ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸುವರಿಗೆ ಪ್ರಯಾಣದ ಟಿಕೇಟ್ ಮತ್ತು ಊಟವನ್ನು ಉಚಿತವಾಗಿಯೇ ಸರ್ಕಾರ ವ್ಯವಸ್ಥೆ ಮಾಡಲಿದೆ. ಇದನ್ನು ಹೊರತುಪಡಿಸಿ ಹೆಚ್ಚುವರಿ ಖರ್ಚನ್ನು ಭಕ್ತರು ತಾವೇ ಭರಿಸಿಕೊಳ್ಳಬೇಕಾಗಲಿದೆ.
ಈ ಕುರಿತು ಪಣಜಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಸಮಾಜಕಲ್ಯಾಣ ಮಂತ್ರಿ ಸುಭಾಷ ಫಳದೇಸಾಯಿ ಮಾಹಿತಿ ನೀಡಿ- ಗೋವಾದ ಜನತೆ ಕೂಡ 144 ವರ್ಷಗಳ ನಂತರ ನಡೆಯುತ್ತಿರುವ ಈ ಮಹಾಕುಂಭ ಮೇಳದಲ್ಲಿ ಪಾಲ್ಗೊಳ್ಳಲು ಯಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಯಾತ್ರೆಯನ್ನು ದೇವದರ್ಶನ ಯೋಜನೆಯಡಿ ಸೇರಿಸಿದೆ. ಈ ಯೋಜನೆಯಡಿ ಗೋವಾದ ಮಡಗಾಂವನಿಂದ ನೇರವಾಗಿ ಪ್ರಯಾಗರಾಜ್ ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಯೋಜನೆಯಡಿ ಪ್ರಯಾಣ ಬೆಳೆಸುವವರು ಫಾರ್ಮ ಭರ್ತಿ ಮಾಡಿ , ಪ್ರಯಾಣದ ಖಾತರಿ ಮಾಡಿಕೊಳ್ಳಬೇಕಾಗುತ್ತದೆ. ಭಕ್ತರ ರೈಲು ಪ್ರಯಾಣದ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ. ಒಟ್ಟೂ ಮೂರು ರೈಲು ಗೋವಾದಿಂದ ಪ್ರಯಾಗ ರಾಜ್ ಗೆ ತೆರಳಲಿದೆ. ಪ್ರತಿ ರೈಲಿನಲ್ಲಿ 1,000 ಪ್ರಯಾಣಿಕರನ್ನು ಕರೆದುಕೊಂಡು ಹೋಗಲಾಗುತ್ತದೆ. ಪ್ರಯಾಗರಾಜ್ ಗೆ ತಲುಪಿದ 24 ಗಂಟೆಗಳ ನಂತರ ರೈಲು ಮತ್ತೆ ಗೋವಾಕ್ಕೆ ಹಿಂದಿರುಗಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ರೈಲಿನ ವೇಳಾಪಟ್ಟಿ,.,,,
ಗೋವಾದಿಂದ ಪ್ರಯಾಗರಾಜ್ ಗೆ ತೆರಳಲು ಮೊದಲ ರೈಲು ಫೆಬ್ರುವರಿ 6 ರಂದು ಮಡಗಾಂವ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಡಲಿದ್ದು ಫೆಬ್ರುವರಿ 10 ರಂದು ಬೆಳಿಗ್ಗೆ 4.30 ಕ್ಕೆ ಪ್ರಯಾಗರಾಜ್ ತಲುಪಲಿದೆ. ಎರಡನೇಯ ರೈಲು ಫೆಬ್ರುವರಿ 13 ರಂದು ಸಂಜೆ 4.40 ಕ್ಕೆ ಮಡಗಾಂವ ನಿಲ್ದಾಣದಿಂದ ಹೊರಡಲಿದೆ. ಗೋವಶದಿಂದ ಹೊರಡುವ ಮೂರನೇಯ ರೈಲು ಫೆಬ್ರುವರಿ 21 ರಂದು ಸಂಜೆ 7.40 ಕ್ಕೆ ಮಡಗಾಂವನಿಂದ ಹೊರಟು ಫೆಬ್ರುವರಿ 26 ರಂದು ಬೆಳಿಗ್ಗೆ 10.30 ಕ್ಕೆ ಪ್ರಯಾಗರಾಜ್ ತಲುಪಲಿದೆ.
ಸಂಪರ್ಕಿಸಿ:-ಆಸಕ್ತರು ದೂರವಾಣಿ 0832-2232257 ನ್ನು ಸಂಪರ್ಕಿಸಬಹುದಾಗಿದೆ. ಮೊದಲು ಸಂಪರ್ಕಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಸೂಚನೆ ನೀಡಿದೆ.