ಸುದ್ದಿಕನ್ನಡ ವಾರ್ತೆ
Goa-Prayagraj: ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಪಾಲ್ಗೊಳ್ಳುವ ಸುಸಂದರ್ಭ ಗೋವಾದ ಜನತೆಗೆ ಲಭಿಸಲಿದೆ. ಮಹಾಕುಂಭ ಮೇಳದಲ್ಲಿ ಗೋವಾದ ಜನತೆ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ದೇವದರ್ಶನ ಯಾತ್ರೆ ಈ ಯೋಜನೆಯ ಅಡಿಯಲ್ಲಿ ಗೋವಾ ರಾಜ್ಯ ಸರ್ಕಾರ ಸ್ವತಂತ್ರ ರೈಲ್ವೆ ವ್ಯವಸ್ಥೆ ಮಾಡಿದೆ. ಗೋವಾದಿಂದ ಪ್ರಯಾಗರಾಜ್ ತೆರಳಲು 3 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಗೋವಾದಿಂದ ಪ್ರಯಾಗರಾಜ್ ಗೆ ತೆರಳಲು ಮೊದಲ ರೈಲು ಫೆಬ್ರುವರಿ 6 ರಂದು ಮಡಗಾಂವ ನಿಲ್ದಾಣದಿಂದ ಬೆಳಿಗ್ಗೆ 8 ಗಂಟೆಗೆ ಹೊರಡಲಿದ್ದು ಫೆಬ್ರುವರಿ 10 ರಂದು ಬೆಳಿಗ್ಗೆ 4.30 ಕ್ಕೆ ಪ್ರಯಾಗರಾಜ್ ತಲುಪಲಿದೆ. ಎರಡನೇಯ ರೈಲು ಫೆಬ್ರುವರಿ 13 ರಂದು ಸಂಜೆ 4.40 ಕ್ಕೆ ಮಡಗಾಂವ ನಿಲ್ದಾಣದಿಂದ ಹೊರಡಲಿದೆ. ಗೋವಶದಿಂದ ಹೊರಡುವ ಮೂರನೇಯ ರೈಲು ಫೆಬ್ರುವರಿ 21 ರಂದು ಸಂಜೆ 7.40 ಕ್ಕೆ ಮಡಗಾಂವನಿಂದ ಹೊರಟು ಫೆಬ್ರುವರಿ 26 ರಂದು ಬೆಳಿಗ್ಗೆ 10.30 ಕ್ಕೆ ಪ್ರಯಾಗರಾಜ್ ತಲುಪಲಿದೆ.

ಗೋವಾ ಸರ್ಕಾರ ನೀಡಿರುವ ಮಾಹಿತಿಯ ಅನುಸಾರ- ಗೋವಾದಿಂದ ಮಹಾಕುಂಭಮೇಳಕ್ಕೆ ತೆರಳುವ 18 ರಿಂದ 60 ವರ್ಷದೊಳಗಿನ ಪ್ರವಾಸಿಗರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ಇರಬಾರದು. ಗೋವಾದಿಂದ ಸುಮಾರು 36 ಗಂಟೆಯ ಪ್ರಯಾಣದ ನಂತರ ಮಹಾಕುಂಭಮೇಳಕ್ಕೆ ತಲುಪಿನ ನಂತರ ಅಲ್ಲಿ 24 ಗಂಟೆಗಳ ಸಮಯಾವಕಾಶ ಇರಲಿದೆ. ಆಸಕ್ತರು ದೂರವಾಣಿ 0832-2232257 ನ್ನು ಸಂಪರ್ಕಿಸಬಹುದಾಗಿದೆ. ಮೊದಲು ಸಂಪರ್ಕಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ಸೂಚನೆ ನೀಡಿದೆ.