ಸುದ್ದಿಕನ್ನಡ ವಾರ್ತೆ
ದಾಂಡೇಲಿ : ನಗರದ ಪ್ರತಿಷ್ಠಿತ ಸ್ವಯಂಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ದಾಂಡೇಲಿಯ ರೋಟರಿ ಕ್ಲಬ್ ಬೆಳಗಾವಿಯಲ್ಲಿ ನಡೆದ ರೋಟರಿ ಸಮ್ಮೇಳನದಲ್ಲಿ ಪಲ್ಸ್ ಪೋಲಿಯೊ ಪ್ರಶಸ್ತಿ ಮತ್ತು ಸಾಕ್ಷರತಾ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ.
ದಾಂಡೇಲಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಪೋಲಿಯೋ ನಿರ್ಮೂಲನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾ ಬಂದಿರುವ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿಯೂ ವಿಶೇಷ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ಬೆಳಗಾವಿಯಲ್ಲಿ ನಡೆದ 66ನೇ ರೋಟರಿ ಸಮ್ಮೇಳನದಲ್ಲಿ ರೋಟರಿ ಅಂತರಾಷ್ಟ್ರೀಯ ಪ್ರತಿನಿಧಿ ಆರ್ಐಪಿಆರ್ ಪಿಡಿಜಿ ರುಚಿರ್ ಜಾನಿ, ರೋಟರಿ ಜಿಲ್ಲಾ ಪ್ರಾಂತಪಾಲರಾದ ಶರದ್ ಪೈ ಮತ್ತು ಪಿಡಿಜಿ ಗೌರೀಶ್ ಧೋಂಡ್ ಅವರಿಂದ ಪಲ್ಸ್ ಪೋಲಿಯೊ ಪ್ರಶಸ್ತಿ ಮತ್ತು ಸಾಕ್ಷರತಾ ಪ್ರಶಸ್ತಿಯನ್ನು ದಾಂಡೇಲಿಯ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ ಕುಮಾರ್ ರಾಯ್ ಮತ್ತು ಖಜಾಂಚಿ ಲಿಯೋ ಪಿಂಟೋ ಅವರು ಸ್ವೀಕರಿಸಿದರು.
ಒಟ್ಟು 145 ರೋಟರಿ ಕ್ಲಬ್ ಗಳ ಪೈಕಿ 10 ರೋಟರಿ ಕ್ಲಬ್ ಗಳು ಈ ಪ್ರಶಸ್ತಿ ಗೌರವಕ್ಕೆ ಪಾತ್ರವಾಗಿದ್ದು, ಅದರಲ್ಲೂ ದಾಂಡೇಲಿಯ ರೋಟರಿ ಕ್ಲಬ್ ಈ ಎರಡು ಪ್ರಶಸ್ತಿಗಳಿಗೂ ಭಾಜನವಾಗಿರುವುದು ವಿಶೇಷವಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಗರದ ರೋಟರಿ ಕ್ಲಬ್ಬಿನ ಪ್ರಮುಖರುಗಳಾದ ಎಸ್.ಜಿ.ಬಿರದಾರ, ಎಚ್.ವೈ.ಮೆರ್ವಾಡೆ, ರಾಜೇಶ ತಿವಾರಿ, ಆರ್.ಪಿ.ನಾಯ್ಕ, ರವಿಕುಮಾರ್ ಜಿ ನಾಯಕ, ಉಸ್ಮಾನ್ ಮುನ್ನಾ ವಹಾಬ್, ಡಾ.ಪರಶುರಾಮ ಸಾಂಬ್ರೇಕರ, ಡಾ.ಜ್ಞಾನದೀಪ ಗಾಂವಕರ ಮತ್ತು ಅಭಿಷೇಕ ರಾಧಾಕೃಷ್ಣ ಕನ್ಯಾಡಿ ಭಾಗವಹಿಸಿದ್ದರು.