ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ:ಪಟ್ಟಣ ವ್ಯಾಪ್ತಿಯ ಬೆಡ್ಸಗದ್ದೆಯ ಲಕ್ಷ್ಮಣ ದೇವೆಂದ್ರಪ್ಪ ಗರಗ್ ವರಿಗೆ ಸೇರಿದ ೩೦ ಚೀಲ ಭತ್ತ, ೨೦೦ ಕ್ಕೂ ಹೆಚ್ಚಿನ ಕಟ್ಟು ಹುಲ್ಲು ಭಾನುವಾರ ರಾತ್ರಿ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ.

 

ಭಾನುವಾರ ಗೊಣವೆ ಒಕ್ಕಿದ್ದು, ಭತ್ತ ಮತ್ತು ಹುಲ್ಲನ್ನು ಬೇರೆ ಮಾಡಿ, ರಾತ್ರಿ ೧೦ ರ ಸುಮಾರಿಗೆ ಕಣ್ಣಳತೆಯ ದೂರದಲ್ಲಿರುವ ಮನೆಗೆ ಊಟಕ್ಕೆ ಹೋಗಿದ್ದರೆನ್ನಲಾಗಿದೆ.

ಊಟ ಮಾಡಿ ಮುಗಿಸಿ, ಬರುವುದರೊಳಗೆ ಬೆಂಕಿಯ ಆರ್ಭಟ ಒಂದೇ ಸಮನೆ ಬೋರ್ಗರೆಯುತ್ತಿದೆ. ವಿದ್ಯುತ್ ಲೈನ್ ಸಮೀಪದಲ್ಲಿದ್ದರೂ ಶಾರ್ಟ್ ಸರ್ಕ್ಯೂಟ್ ಆದ ಲಕ್ಷಣವಿಲ್ಲ. ಯಾರೋ ಬೆಂಕಿ ಹಾಕಿರಬಹುದೆಂದು ಲಕ್ಷ್ಮಣ ಗರಗ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ನಾವ್ಯಾರೂ ಇರಲಿಲ್ಲವಾಗಿತ್ತು. ೩೦ ಚೀಲ ಭತ್ತ ಮತ್ತು ಹುಲ್ಲು ಸೇರಿ ೭೫೦೦೦ ಕ್ಕೂ ಹೆಚ್ಚಿನ ಮೌಲ್ಯದ ಇಡೀ ವರ್ಷದ ಬದುಕು ಅಗ್ನಿಗೆ ಆಹುತಿಯಾಗಿದೆ. ಲಕ್ಷ್ಮಣ ಗರಗ್ ಪೋಲೀಸ್ ದೂರು ನೀಡಿದ್ದಾರೆ.

ರಾತ್ರಿ ಸಾರ್ವಜನಿಕರು ಮತ್ತು ಅಗ್ನಿಶಾಮಕ ಠಾಣೆ ವಾಹನ ಹೋಗಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ.