ಸುದ್ಧಿಕನ್ನಡ ವಾರ್ತೆ
Goa  Mapusa: ಗೋವಾದ ಮಾಪ್ಸಾ ಪರ್ರಾದಲ್ಲಿ ವಿಲ್ಹಾಕ್ಕೆ ಬಂದಿಳಿದಿದ್ದ ತೆಲಂಗಾಣದ ಪರ್ರವಾಸಿಗರ ಬಳಿಯಿದ್ದ ಬಂಗಾರ,ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಪ್ಸಾ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ. ಈತ ಕಳ್ಳತಬ ಮಾಡಿದ್ದ ಸುಮಾರು 5 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಪೋಲಿಸರು ವಷಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಮೂಲತಃ ಕರ್ನಾಟಕದವನಾಗಿದ್ದು ಪುಂಡಲೀಕ ಲಕ್ಷ್ಮಣ ಚೌಹಾಣ್ ಉರ್ಫ ಲಮಾಣಿ (28) ಎಂಬ ವ್ಯಕ್ತಿಯಾಗಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಈ ಕಳ್ಳತನ ಪ್ರಕರಣ ಜನವರಿ 31 ರಂದು ನಡೆದಿದೆ. ಆರೋಪಿಯು ರಾತ್ರಿಯ ವೇಳೆ ವಿಲ್ಹಾದಲ್ಲಿ ನುಗ್ಗಿದ್ದಾನೆ. ಈ ಪ್ರಕರಣದಲ್ಲಿ ರಕ್ಷಿತ ಗುಫ್ತಾ ಫಿರ್ಯಾದಿಯಾಗಿದ್ದಾರೆ. ಆರೋಪಿಯು ವಿಲ್ಹಾದ ಕಿಡಕಿಯಿಂದ ಒಳ ಪ್ರದಶಿಸಿದ್ದಾನೆ. ದೂರುದಾರರ ಬ್ಯಾಗ್ ನಲ್ಲಿದ್ದ ಬಂಗಾರದ ಆಭರಣ, ಹಣ ದೋಚಿದ್ದಾನೆ. ಪೋಲಿಸರು ಬಂಧಿತನಿಂದ 8 ಸಾವಿರ ರೂ ಹಣ ಸೇರಿದಂತೆ 5 ಲಕ್ಷ ರೂ ಮೌಲ್ಯದ ವಿವಿಧ ವಸ್ತುಗಳನ್ನು ವಷಪಡಿಸಿಕೊಂಡಿದ್ದಾರೆ.

ಪೋಲಿಸ್ ಉಪ ಅಧೀಕ್ಷಕ ಸಂದೇಶ ಚೋಡಣಕರ್ ರವರ ಮಾರ್ಗದರ್ಶನದಲ್ಲಿ ನಿರೀಕ್ಷಕ ನಿಖಿಲ್ ಪಾಲಯೇಕರ್ ರವರ ನೇತೃತ್ವದಲ್ಲಿ ಉಪನಿರೀಕ್ಷಕ ವಿಶಾಲ ಕುಟ್ಟೀಕರ್, ಅಜಯ ಧುರಿ, ಹೆಡ್ ಕಾನ್ಸಟೆಬಲ್ ಸುಶಾಂತ ಚೋಪಡೆಕರ್, ಕಾನ್ಸಟೆಬಲ್ ಪ್ರಕಾಶ ಪೋಳೆಕರ್, ಅಕ್ಷಯ ಪಾಟೀಲ, ಮಹೇಂದ್ರ ಮಾಂದ್ರೇಕರ್, ಆನಂದ ರಾಠೋಡ್, ಪ್ರಿಯೇಶ ಪೆಡ್ನೆಕರ್, ರಾಜೇಶ್ ಕಾಂದೋಳಕರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.