ಸುದ್ದಿ ಕನ್ನಡ ವಾರ್ತೆ
ಚಿಕ್ಕಮಗಳೂರು: ಚಿಕ್ಕಮಗಳೂರು ಭಾಗದಲ್ಲಿ ಭಾನುವಾರ ಸುರಿದ ಭಾರಿ ಗಾಳಿ ಗೆ ರಸ್ತೆಯ ಮಧ್ಯೆ ಬೃಹತ್ ಮರ ಉರುಳಿ ಬಿದ್ದು ಚಿಕ್ಕಮಗಳೂರು ಶೃಂಗೇರಿ ರಸ್ತೆ ಸಂಚಾರ ಕೆಳಗಂಟೆಗಳ ಕಾಲ ಬಂದ್ ಆದ ಘಟನೆ ನಡೆದಿದೆ.
ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮರದ ತೆರವು ಕಾರ್ಯಾಚರಣೆ ಕೈಗೊಂಡರು. ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.