ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಕಳೆಸ ಸುಮಾರು 25 ವರ್ಷಗಳಿಂದ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆ. ರೈಲ್ವೆ ಯೋಜನೆ ಬೇಕು-ಬೇಡಾ ಎನ್ನುವವರ ನಡುವೆ ರಾಷ್ಟ್ರಮಟ್ಟದಲ್ಲಿ ಹೋರಾಟ ನಡೆಯುತ್ತಲೇ ಇದೆ. ಯಲ್ಲಾಪುರ-ಅಂಕೋಲಾ ನಡುವಿನ ರೈಲು ಹಳಿ ಹಾದುಹೋಗಬಹುದಾದ ಅರಣ್ಯ ಪ್ರದೇಶದಲ್ಲಿ ಡೆಹರಾಡೂನಿನ ಭಾರತೀಯ ವನ್ಯಜೀವಿ ಸಂಸ್ಥೆಯವರು ಸರ್ವೆ ಆರಂಭಿಸಿರುವುದು ಇದೀಗ ಈ ರೈಲು ಯೋಜನೆಯ ಆರಂಭದ ಕುರಿತು ಚರ್ಚೆ ಆರಂಭಗೊಂಡಿದೆ.
ಕಳೆದ ಹಲವು ದಿನಗಳಿಂದ ಡೆಹರಾಡೂನಿನ ವನ್ಯಜೀವಿ ಸಂಸ್ಥೆಯವರು ಉತ್ತರಕನ್ನಡದ ಯಲ್ಲಾಪುರ ಭಾಗದಲ್ಲಿ ಬೀಡುಬಿಟ್ಟಿದ್ದಾರೆ. ಈ ಭಾಗದಲ್ಲಿ ರೈಲ್ವೆ ಹಳಿ ಹಾದುಹೋಗುವ ಭಾಗದಲ್ಲಿ ಸರ್ವೆ ನಡೆಸಿದ್ದಾರೆ. ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆ ಬರುವುದರಿಂದ ತಜ್ಞರು ಇಲ್ಲಿನ ಅಪರೂಪದ ಸಸ್ಯ ಸಂಕುಲ ಮತ್ತು ಇತರ ವಿಷಯಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ರೈಲ್ವೆ ಹಳಿ ಹಾದು ಹೋಗುವ ಭಾಗದಲ್ಲಿ ಪ್ರತಿ ಒಂದು ಕಿಮಿ ಅಂತರದಲ್ಲಿ ಕ್ಯಾಮರಾ ಅಳವಡಿಸಿ ಅಲ್ಲಿ ಓಡಾಡುವ ಪ್ರಾಣಿಗಳ ಬಗ್ಗೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಪ್ರಕರಣ…?
ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯಿಂದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಕ್ಕೆ ಹಾನಿಯಾಗಲಿದೆ ಎಂದು ಪರಸರ ಹೋರಾಟಗಾರ ಸಂಘಟನೆಗಳು ನ್ಯಾಯಾಕಯದ ಮೊರೆ ಹೋಗಿದ್ದವು. ಆದರೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಯೋಜನೆ ಜಾರಿಯಾದರೆ ಅಭ್ಯಂತರವಿಲ್ಲ ಎಂದು 2016 ರಲ್ಲಿ ರಾಷ್ಟ್ರೀಯ ಹಸಿರು ಪೀಠ ಹೇಳಿತ್ತು. ಇದಾದ ಮೇಲೂ ಕೂಡ ನ್ಯಾಯಾಯದಲ್ಲಿ ದಾವೆ ಸಲ್ಲಿಕೆಯಾಗಿತ್ತು. ವನ್ಯಜೀವಿ ಮಂಡಳಿಯ ಸಹಾಯದೊಂದಿಗೆ ಅಧ್ಯಯನ ನಡೆಸಿ ಪ್ರಸ್ತಾವನೆ ಸಲ್ಲಿಸಲು ಹೈಕೋರ್ಟ ರೈಲ್ವೆ ಇಲಾಖೆಗೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಡೆಹರಾಡೂನಿನ ವನ್ಯಜೀವಿ ಸಂಸ್ಥೆಯವರು ಉತ್ತರಕನ್ನಡದಲ್ಲಿ ರೈಲ್ವೆ ಹಳಿ ಹಾದುಹೋಗುವ ಭಾಗದಲ್ಲಿ ಸರ್ವೆ ನಡೆಸಿದ್ದಾರೆ.