ಸುದ್ಧಿಕನ್ನಡ ವಾರ್ತೆ
Goa : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಇಂದು ಮಂಡಿಸಿದ ಬಜೇಟ್ ನಲ್ಲಿ 12 ಲಕ್ಷ ರೂ ವರೆಗಿನ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಆದಾಯ ತೆರಿಗೆ ವಿನಾಯತಿ ಘೋಷಿಸಲಾಗಿದೆ. ಇದು ಮಧ್ಯಮ ವರ್ಷವನ್ನು ಸಬಲ ಗೊಳಿಸುತ್ತದೆ,ಹೆಚ್ಚಿನ ಉಳಿತಾಯಕ್ಕೂ ಕಾರಣವಾಗುತ್ತದೆ ಮತ್ತು ಹೂಡಿಜೆಯನ್ನು ಹೆಚ್ಚಿಸುತ್ತದೆ. ಬಲಿಷ್ಠ ಮಧ್ಯಮವರ್ಗವೆಂದರೆ ಬಲಿಷ್ಠ ಭಾರತ್ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಪ್ರಸಕ್ತ ಕೇಂದ್ರ ಬಜೇಟ್ ಗೆ ಸಂಬಂಧಿಸಿದಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಠಿಯ ನಾಯಕತ್ವದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾನ್ ರವರು ಮಂಡಿಸಿದ ಅಭಿವೃದ್ಧಿ ಹೊಂದಿದ ಭಾರತ 2025 ಬಜೇಟ್ ನ್ನು ನಾನು ಸ್ವಾಗತಿಸುತ್ತೇನೆ. ಈ ಬಜೇಟ್ ಬಲಿಷ್ಠ ಮತ್ತು ಸಮೃದ್ಧ ಬಾರತಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಬಣ್ಣಿಸಿದರು.
ಕೃಷಿ ಅಭಿವೃದ್ಧಿ, ಗ್ರಾಮೀಣ ಸಮೃದ್ಧಿ, ಸಮಗ್ರ ಬೆಳವಣಿಗೆ, ಎಂಎಸ್ ಎಂಇ ಗಳಿಗೆ ಬೆಂಬಲ, ಉದ್ಯೋಗ ಸೃಷ್ಠಿ, ಕಾರ್ಮಿಕ ಹೂಡಿಕೆ, ಇಂಧನದ ಮೂಲಗಳನ್ನು ಸುರಕ್ಷಿತಗೊಳಿಸವುದು. ರಪ್ತುಗಳನ್ನು ಉತ್ತೇಜಿಸುವುದು, ಹೀಗೆ ಆರ್ಥಿಕತೆಯನ್ನು ಬಲಪಡಿಸುವತ್ತ ಬಜೇಟ್ ಗಮನಹರಿಸಿದೆ. ತೆರಿಗೆ,ವಿದ್ಯುತ್ ವಲಯ, ನಗರಾಭಿವೃದ್ಧಿ, ಹಣಕಾಸು ನಿಯಂತ್ರಣ, ರಫ್ತು ಉತ್ತೇಜನದಲ್ಲಿ ಪರಿವರ್ತನಾತ್ಮಕ ಸುಧಾರಣೆಗಳನ್ನು ಬಜೇಟ್ ಪರಿಚಯಿಸಿದೆ ಎಂದು ಮುಖ್ಯಮಂತ್ರಿ ಸಾವಂತ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಜೇಟ್ ನಮ್ಮ ಬದ್ಧತೆಯನ್ನು ಪುನರುಚ್ಛರಿಸುತ್ತದೆ. ನಮ್ಮ ಪ್ರಯತ್ನಗಳು ಭಾರತವನ್ನು 2047 ರ ಅಭಿವೃದ್ಧಿ ಹೊಂದಿದ ಭಾರತದ ದೃಷ್ಠಿಕೋನದತ್ತ ಕೊಂಡೊಯ್ಯುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಬಣ್ಣಿಸಿದ್ದಾರೆ.