ಸುದ್ಧಿಕನ್ನಡ ವಾರ್ತೆ
ಬೆಳಗಾವಿ: ಪ್ರಯಾಗರಾಜ್ ನಲ್ಲಿ ಮೌನಿ ಅಮಾವಾಸ್ಯೆಯಂದು ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದ ಬೆಳಗಾವಿಯ 4 ಜನರ ಮೃತದೇಹ ಶುಕ್ರವಾರ ರಾತ್ರಿ ಬೆಳಗಾವಿಗೆ ಬಂದು ತಲುಪಿದೆ.
ಗೋವಾ ಮೂಲಕ ಬಂದ ಮೃತದೇಹ..
ಪ್ರಯಾಗರಾಜ್ ನಲ್ಲಿ ಕಾಲ್ತುಳಿತ ಘಟನೆಯಲ್ಲಿ ಮೃತಪಟ್ಟ ಇಬ್ಬರ ಮೃತದೇಹವನ್ನು ಶುಕ್ರವಾರ ಸಂಜೆ ದೆಹಲಿ ಮೂಲಕ ವಿಮಾನದಲ್ಲಿ ಗೋವಾಕ್ಕೆ ತಂದು ನಂತರ ಗೋವಾದಿಂದ ಬೆಳಗಾವಿದೆ ಕರೆದೊಯ್ಯಲಾಯಿತು. ಇನ್ನಿಬ್ಬರ ಮೃತ ದೇಹ ದೆಹಲಿಯಿಂದ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು.
ಶಿವಾಜಿನಗರದ ಮಹಾದೇವಿ ಬಾವನೂರು ಹಾಗೂ ಶೆಟ್ಟಿ ಗಲ್ಲಿಯ ಅರುಣ್ ಕೋಪರ್ಡೆ ರವರ ಮೃತದೇಹವು ನೇರವಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ತರಲಾಯಿತು. ವಡಗಾವಿ ಜ್ಯೋತಿ ಹತ್ತರವಾಠಮ ಪುತ್ರಿ ಮೇಘಾ ರವರ ಮೃತದೇಹವು ದೆಹಲಿಗೆ ತಡವಾಗಿ ಬಂದು ತಲುಪಿದ್ದರಿಂದ ದೆಹಲಿಯಿಂದ ಮೃತದೇಹವನ್ನು ಗೋವಾಕ್ಕೆ ತಂದು ಅಲ್ಲಿಂದ ಬೆಳಗಾವಿಗೆ ತರಲಾಯಿತು. ವಡಗಾವಿಯ ಮೇಘಾ ರವರ ಮದುವೆಯು ಬರುವ ಮಾರ್ಚನಲ್ಲಿ ನಿಶ್ಚಯವಾಗಿತ್ತು. ಮಾತುಕತೆ ಕೂಡ ಮುಗಿದಿತ್ತು. ಆದರೆ ಹಸೆಮಣೆ ಏರಬೇಕಿದ್ದವಳು ಇದೀಗ ಶವವಾಗಿ ಬಂದಿದ್ದಾಳೆ. ಈ ದೃಶ್ಯ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.