ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಯಲ್ಲಾಪುರದ ಮಾಗೋಡ ಆಲೆಮನೆ ಹಬ್ಬದಲ್ಲಿ ಬೆಂಗಳೂರು MLA ಪದವಿಪೂರ್ವ ಕಾಏಜಿನ ಪ್ರಾಂಶುಪಾಲರಾದ ಡಾ.ಗಣಪತಿ ಹೆಗಡೆ ರವರ ಸಂಸ್ಕೃತಿ ಪಲ್ಲವ ಎಂಬ ಪುಸ್ತಕ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಕಾಲೋನಿಯಲ್ಲಿ ಫೆಬ್ರುವರಿ 1 ರಂದು ಸಂಜೆ 5 ಗಂಟೆಯಿಂದ ಪ್ರಸಿದ್ಧ ಆಲೆಮನೆ ಹಬ್ಬ ಆಯೋಜಿಸಲಾಗಿದೆ. ಮೈತ್ರಿ ಸಂಸ್ಕೃತ-ಸಂಸ್ಕೃತಿ ಪ್ರತಿಷ್ಠಾನ (ರಿ) ಬೆಂಗಳೂರು ಈ ಸಂಸ್ಥೆಯನ್ನು ಸ್ಥಾಪಿಸಿ ಕಳೆದ ಅನೇಕ ವರ್ಷಗಳಿಂದ ಡಾ.ಗಣಪತಿ ಹೆಗಡೆ ರವರು ಸನಾತನ  ಸಂಸ್ಕೃತಿಯ ಪ್ರಚಾರ ಪ್ರಸಾರಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಇವರನ್ನು ಮಾಗೋಡು ಆಲೆಮನೆ ಹಬ್ಬದಲ್ಲಿ ಸನ್ಮಾನಿಸಲಾಗುತ್ತಿದೆ. ಈ ಸನ್ಮಾನ ಕಾರ್ಯಕ್ರಮವನ್ನು ಗೋವಾದ ಮಾರ್ಶೆಲ್ ನ ಸರಸ್ವತಿ ನಾರಾಯಣ ಭಟ್ ಹಾಗೂ ಗೋವಾ ಅಮೋಣಾದ ಶ್ವೇತಾ ವೆಂಕಟ್ರಮಣ ಭಟ್ ರವರು ಕಾರ್ಯಕ್ರಮದ ಸಂಯೋಜಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಡಾ.ಗಣಪತಿ ಹೆಗಡೆ ರವರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದವರು. ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದವರು. ಶ್ರೀ ರವಿಶಂಕರ ಗುರೂಜಿ ರವರ ಆರ್ಟ ಆಫ್ ಲಿವಿಂಗ್ ಗುರುಕುಲದಲ್ಲಿ  ಸಂಸ್ಕೃತ, ಯೋಗ,ವೇದಾದ್ಯಯನ ಮಾಡಿದರು. ಸುಭಾಷಿತಗಳ ಅಧ್ಯಯನ ಎಂಬ ವಿಷಯವನ್ನು ಕುರಿತು ರಚಿಸಿದ ಮಹಾಪ್ರಭಂದವನ್ನು ಪರಿಗಣಿಸಿ ಡಾ.ಗಣಪತಿ ಹೆಗಡೆ ರವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗಿದೆ. ನಿತ್ಯವೂ ಆನ್ ಲೈನ್ ಮೂಲಕ ಮಕ್ಕಳಿಗೆ ಮತ್ತು ಆಸಕ್ತರಿಗೆ ಸಂಸ್ಕøತವನ್ನು ಹೇಳಿಕೊಡುತ್ತಿದ್ದಾರೆ. ಆಕಾಶವಾಘಿ, ದೂರದರ್ಶನ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಹಲವಾರು ಸಂಸ್ಕøತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹಲವು ಕೃತಿಗಳನ್ನು ರಚಿಸಿದ ಡಾ.ಗಣಪತಿ ಹೆಗಡೆ ರವನ್ನು ಮಾಗೋಡು ಆಲೆಮನೆ ಹಬ್ಬದಲ್ಲಿ ಸನ್ಮಾನಿಸಲಾಗುತ್ತಿದೆ.