ಸುದ್ಧಿಕನ್ನಡ ವಾರ್ತೆ
ನವದೆಹಲಿ: ಚಿನ್ನದ (Gold Price) ಬೆಲೆ ದಾಖಲೆಯ ಏರಿಕೆ ಕಂಡಿದೆ. 10 ಗ್ರಾ ಂ ಚಿನ್ನ 83,800 ರೂ ತಲುಪಿದ್ದು ಇದುವರೆಗಿನ ಗರಿಷ್ಠ ಬೆಲೆ ಇದಾಗಿದೆ. ಕಳೆದ ಕೆಲ ವರ್ಷಗಳಿಂದ ಚಿನ್ನದ ದರದಲ್ಲಿ ಭಾರಿ ಏರಿಕೆಯಾಗುತ್ತಿದ್ದು, ಆಭರಣ ಪ್ರಿಯರಿಗೆ ಮೇಲಿಂದ ಮೇಲೆ ಶಾಕ್ ನೀಡುತ್ತಿದೆ.
ಶೇ 99.5 ರಷ್ಟು ಶುದ್ಧತೆಯ ಚಿನ್ನವು 50 ರೂ ಏರಿಕೆಯಾಗಿ 83,800 ರೂ ಗೆ ತಲುಪಿದೆ. ಬೆಳ್ಳಿ ದರ ಪ್ರತಿ ಕೆಜಿಗೆ 94,150 ರೂ ಗೆ ತಲುಪಿದೆ. ಸದ್ಯ ಹಬ್ಬ ಹರಿದಿನ ಮತ್ತು ಮದುವೆ ಸೀಜನ್ ಆಗಿರುವುರಿಂದ ಚೆನ್ನದ ಬೆಲೆ ಇನ್ನಷ್ಟು ಹೆಚ್ಚಲಿದೆ ಎಂಬುದು ಹಲವರ ಅಭಿಪ್ರಾಯವಾಗಿದೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯ ನಾಗಾಲೋಟವನ್ನು ಗಮನಿಸಿದರೆ ಇನ್ನು ಕೆಲವೇ ತಿಂಗಳಲ್ಲಿ 1 ಲಕ್ಷ ಗಡಿ ದಾಟಲಿದೆಯೇ… ಎಂಬ ಪ್ರಶ್ನೆ ಎದುರಾಗಿದೆ. ಒಟ್ಟಾರೆ ಸದ್ಯದ ಸ್ಥಿತಿಯಲ್ಲಂತೂ ಜನಸಾಮಾನ್ಯರ ಕೈಗೆಟುಕದ ದರಕ್ಕೆ ಚಿನ್ನ ತಲುಪಿದೆ.