ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ (NEP) ಇಲಾಖೆಯು ಏಪ್ರಿಲ್ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭಿಸಲು ನಿರ್ಧರಿಸಿದೆ. ಇದರ ಅಡಿಯಲ್ಲಿ 6 ರಿಂದ 10 ಮತ್ತು 12 ನೇಯ ತರಗತಿಗಳಿಗೆ ಏಪ್ರಿಲ್ ನಲ್ಲಿ ಬೆಳಿಗ್ಗೆ 11.30 ರ ವರೆಗೆ ಮಾತ್ರ ತರಗತಿಗಳು ಇರುತ್ತದೆ.ಮೇ 1 ರಿಂದ ಜೂನ್ 4 ರವರೆಗೆ ಬೇಸಿಗೆ ರಜೆ ಇರಲಿದೆ. ಜೂನ್ 4 ರಿಂದ ತರಗತಿಗಳು ಪುನರಾರಂಭಗೊಳ್ಳಲಿದೆ ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. (There is no April holiday in Goa, the new academic year starts from 1st April itself).

ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ವಾರಕ್ಕೆ 36 ರಿಂದ 39 ಗಂಟೆಗಳ ಕಾಲ ಶಾಲಾ ತರಗತಿಗಳನ್ನು ನಡೆಸುವುದು ಖಡ್ಡಾಯವಾಗಿದೆ. ಈ ದಿನಗಳನ್ನು ತುಂಬಲು ಏಪ್ರಿಲ್ ನಲ್ಲಿ ತರಗತಿಗಳನ್ನು ನಡೆಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಈ ಹಿಂದೆ ಹೊಸ ಶೈಕ್ಷಣಿಕ ವರ್ಷ ಜೂನ್ ನಕ್ಲಿ ಆರಂಭಗೊಳ್ಳುತ್ತಿತ್ತು. ಏಪ್ರಿಲ್ ನಲ್ಲಿ ಅಂತಿಮ ಪರೀಕ್ಷೆ ನಡೆದಾಗ ವಿದ್ಯಾರ್ಥಿಗಳಿಗೆ ರಜೆ ಇರುತ್ತಿತ್ತು.