ಸುದ್ಧಿಕನ್ನಡ ವಾರ್ತೆ
ಅಮೇರಿಕ: ಅಮೇರಿಕದ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಿಲಿಟರಿ ಹೆಲಿಕ್ಯಾಪ್ಟರ್ ಗೆ ಡಿಕ್ಕಿ ಹೊಡೆದು ಪೊಟೊಮ್ಯಾಕ್ ನದಿಯಲ್ಲಿ ವಿಮಾನ ಬಿದ್ದು ವಿಮಾನದಲ್ಲಿದ್ದ ಎಲ್ಲಾ 64 ಜನ ಮೃತಪಟ್ಟ ಶಂಕೆಯಿದೆ. ಈಗಾಗಲೇ ಹಲವರ ಮೃತ ದೇಹಗಳನ್ನು ರಕ್ಷಣಾ ಕಾರ್ಯ ತಂಡ ಹೊರತೆಗೆದಿದೆ.(The plane collided with the helicopter and fell into the river, a terrible incident in America)

ಈ ಘಟನೆಗೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಡಬ್ಲ್ಯೂ ಬಿಎಎಲ್ ಟಿವಿ ವರದಿ ಮಾಡಿದೆ. ಸೀಕೋಸ್ರ್ಕಿ ಎಚ್-60 ಆರ್ಮಿ ಬ್ಲ್ಯಾಕ್ ಹ್ಯಾಕ್ ಹೆಲಿಕ್ಯಾಪ್ಟರ್ ಗೆ ಈ ವಿಮಾನ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿದ್ದ 64 ಜನರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ನಿನ್ನೆ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿವೆ.