ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಮೋಬರ್ ಬೀಚ್ ನಲ್ಲಿ ಬೀದಿ ನಾಯಿಗಳ ಸಾಮ್ರಾಜ್ಯವೇ ಸೃಷ್ಠಿಯಾಗಿದೆ. ಇದರಿಂದಾಗಿ ಇಲ್ಲಿಗೆ ಬರುವ ಪ್ರವಾಸಿಗರೇ ಭಯಪಡುವಂತಾಗಿದೆ. ಕಳೆದ ಕೆಲ ದಿನಗಳಲ್ಲಿಯೇ ಇಲ್ಲಿ ಹಲವು ಪ್ರವಾಸಿಗರಿಗೆ ನಾಯಿ ಕಟ್ಟಿರುವ ಬಗ್ಗೆ ಮಾಹಿತಿ ಬಂದಿದೆ.
ಗೋವಾ ರಾಜ್ಯ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿದೆ. ಗೋವಾಕ್ಕೆ ಬಹುಮುಖ್ಯವಾಗಿ ಪ್ರವಾಸಿಗರು ಕಡಲ ತೀಗಳಿಂದ ಆಕರ್ಷಿತರಾಗುತ್ತಾರೆ. ಆದರೆ ಗೋವಾದ ಮೋಬರ್ ಬೀಚ್ ನಲ್ಲಿ ನಾಯಿಗಳ ಕಾಟ ಹೆಚ್ಚಿಗಿದ್ದು ಪ್ರವಾಸಿಗರೇ ಭಯಪಡುವಂತಾಗಿದೆ. ಈ ಬೀಚ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ದೇಶ ವಿದೇಶಿಯ ಪ್ರವಾಸಿಗರು ಆಗಮಿಸುತ್ತಿದ್ದು ಕಳೆದ ಕೆಲ ದಿನಗಳಲ್ಲಿ ಹಲವು ಪ್ರವಾಸಿಗರ ಮೇಲೆ ನಾಯಿ ಧಾಳಿ ನಡೆಸಿದೆ ಎನ್ನಲಾಗಿದೆ.
ಸ್ಥಳೀಯ ಆಡಳಿತ ಕೂಡಲೇ ಎಚ್ಚೆತ್ತು ಪ್ರವಾಸಿಗರ ಸುರಕ್ಷತಾ ದೃಷ್ಠಿಯಿಂದ ಕ್ರಮ ಕೈಗೊಳ್ಳುವಂತೆ ಆಘ್ರಹ ವ್ಯಕ್ತವಾಗಿದೆ.