ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ಕರ್ನಾಟಕದಲ್ಲಿ ಸದ್ಯ ಭಾರಿ ಚಳಿಯ ನಡುವೆಯೇ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯನ್ನು ಭಾರತೀಯ ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ಮುಂದಿನ 5 ರಿಂದ 7 ದಿಣಗಳ ಮುನ್ಸೂಚನೆಯ ವರದಿಯಲ್ಲಿ ಮುಂದಿನ 2 ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯ ನಿರೀಕ್ಷೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ಸದ್ಯ ಕರ್ನಾಟಕ ರಾಜ್ಯದಲ್ಲಿ ಒಣಹವೆ ಪ್ರಮಾಣ ಹೆಚ್ಚಾಗುತ್ತಿದೆ. ಫೆಬ್ರುವರಿ 1 ಮತ್ತು 2 ರಂದು ಕರ್ನಾಟಕದ ಸುಮಾರು 20 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜನವರಿ 31 ರಿಂದಲೇ ವಾತಾವರಣದಲ್ಲಿ ವ್ಯಾಪಕ ಬದಲಾವಣೆಯಾಗಲಿದ್ದು, ಅಂದುಸಹ ಕೆಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಫೆಬ್ರುವರಿ 1 ಮತ್ತು 2 ರಂದು ಉತ್ತರಕನ್ನಡ,ದಕ್ಷಿಣಕನ್ನಡ,ಚಿತ್ರದುರ್ಗ,ಉಡುಪಿ, ಬಾಗಲಕೋಟೆ,ಧಾರವಾಡ,ಹಾವೇರಿ,ವಿಜಯಪುರ,ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,ಚಾಮರಾಜನಗರ,ಚಿಕ್ಕಗಳೂರು,ಹಾಸನ,ಕೊಡಗು,ಕೋಲಾರ,ಮಂಡ್ಯ,ಮೈಸೂರು,ರಾಮನಗರ,ಶಿವಮೊಗ್ಗ,ತುಮಕೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಹವಾಮಾನ ವೈಪರಿತ್ಯವುಂಟಾಗಿದೆ.ಬಂಗಾಳಕೊಲ್ಲಿಯಲ್ಲಿ ಸುಳಿಗಾಳಿ ತೀವ್ರ ಸ್ವರೂಪ ಪಡೆದರೆ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.