1. ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ಶನಿವಾರ ಸ್ವರ್ಣವಲ್ಲೀ‌ ಮಠದಲ್ಲಿ ಎರಡು‌ ದಿನಗಳ ತಾಳಮದ್ದಲೆ ಸ್ಪರ್ಧೆಗೆ ಹಾಗೂ ಯಕ್ಷೋತ್ಸವಕ್ಕೆ ಚಾಲನೆ‌ ನೀಡಿ, ದಿ.ಎಂ.ಎ.ಹೆಗಡೆ ದಂಟ್ಕಲ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಪ್ರಶಸ್ತಿಯನ್ನು‌ ಬಹುಶೃತ ವಿದ್ವಾಂಸ, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ವಿದ್ವಾಂಸ, ಡಾ. ಜಿ.ಎಲ್.ಹೆಗಡೆ ಕುಮಟಾ ಅವರಿಗೆ ಪ್ರದಾನ ಮಾಡಿದರು.

ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ‌ ಹರಿಪ್ರಕಾಶ ಕೊಣೆಮನೆ, ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ, ಕಾರ್ಯದರ್ಶಿ ನಾಗರಾಜ ಜೋಶಿ ಸೋಂದಾ,
ಪ್ರವೀಣ ‌ಮಣ್ಮನೆ, ನಾರಾಯಣ ಬುಳ್ಳಿ, ಮಾಯಾ ಹೆಗಡೆ ಇತರರು ಇದ್ದರು.