ಸುದ್ಧಿಕನ್ನಡ ವಾರ್ತೆ
ಬೆಂಗಳೂರು: ತಮ್ಮ ಗ್ರಾಮೀಣ ಶೈಲಿಯ ಹಾಡು ಸರಳತೆಯ ಮೂಲಕ ಪ್ರಸಿದ್ಧಿಯಾಗಿದ್ದ ಹಾವೇರಿಯ ಹನುಮಂತ ಲಮಾಣಿ ಕಲರ್ಸ ಕನ್ನಡದ ಬಿಗ್ ಬಾಸ್ (Big Boss)  ಸೀಜನ್ 11 ರಲ್ಲಿ ಗೆಲುವು ಸಾಧಿಸಿದ್ದಾರೆ.

ಸವಣೂರು ತಾಲೂಕಿನ ಚಿಲ್ಲೂರು ಬಡ್ಡಿ ಗ್ರಾಮದ ನಿವಾಸಿ ಹನುಮಂತ ಲಮಾಣಿ ಆನ್ ಲೈನ್ ಮತದಾನದ ಮೂಲಕ ವೀಕ್ಷಕರಿಂದ 5.23 ಕೋಟಿ ಮತಗಳನ್ನು ಪಡೆದು ಪ್ರಸಕ್ತ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತ್ಯಂತ ಹೆಚ್ಚು ಮತ ಪಡೆದ ವಿನ್ನರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಚಿಲ್ಲೂರು ಬಡ್ಡಿ ಗ್ರಾಮದ ತಾಂಡಾದ ಮೇಘಪ್ಪ ಹಾಗೂ ತಾಯಿ ಶೀಲವ್ವ ದಂಪತಿಗಳ ಪುತ್ರ ಹನುಮಂತ. ತಂದೆಯವರು ಕುರಿ ಕಾಯುತ್ತ ಮಗನನ್ನು ಸಾಕಿದ್ದಾರೆ. ಹನುಮಂತ ರವರಿಗೆ ಅಣ್ಣ ತಂಗಿ ಹಾಗೂ ಮೂವರು ಅಕ್ಕಂದಿರಿದ್ದಾರೆ.