ಸುದ್ಧಿಕನ್ನಡ ವಾರ್ತೆ

Goa : ಗೋವಾ ರಾಜ್ಯ ಶಿಕ್ಷಣ ಇಲಾಖೆಯು ವೀರ್ ಗಾಥಾ 4.0 ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಪ್ಯಾರಾಗ್ರಾಪ್ ಬರವಣಿಗೆ ಸ್ಫರ್ಧೆಯಲ್ಲಿ ಗೋವಾ ಕನ್ನಡ ಕುವರಿ ಪ್ರಾಪ್ತಿ ಪರಶುರಾಮ ಪೂಜಾರಿ ಪ್ರಶಸ್ತಿ ಪಡೆದುಕೊಂಡು ಸಾಧನೆಗೈದಿದ್ದಾಳೆ.

ಈ ಸ್ಫರ್ಧೆಯಲ್ಲಿ ಗೋವಾ ರಾಜ್ಯದ ವಿವಿದೆಡೆಯಿಂದ 17,000 ವಿದ್ಯಾರ್ಥಿಗಳು ಭಾತಗವಹಿಸಿದ್ದರು. ಪಣಜಿ ಸಮೀಪದ ಪರ್ವರಿಯಲ್ಲಿರುವ ಶಿಕ್ಷಣ ಇಲಾಖೆಯ ವತಿಯಿಂದ ಪ್ರಶಸ್ತಿ ನೀಡಲಾಗಿದೆ. ಗೋವಾದ ವಿವುಧ ಕನ್ನಡ ಸಂಘಟನೆಳು ಇವಳಿಗೆ ಅಭಿನಂದನೆ ಸಲ್ಲಿಸಿವೆ.