ಸುದ್ಧಿಕನ್ನಡ ವಾರ್ತೆ
Goa Temple: ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅನೇಕ ಪ್ರವಾಸಿಗರು ಇಲ್ಲಿನ ಕಡಲ ತೀರಗಳಿಂದ ಆಕರ್ಷಿತರಾಗುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಗ್ರಾಮೀಣ ಪ್ರದೇಶಗಳಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ಕಂಡುಬರುತ್ತದೆ. ಪ್ರಮುಖವಾಗಿ ಗೋವಾದ ರಾಮನಾಥಿ ದೇವಸ್ಥಾನ, ನಾಗೇಶಿ ದೇವಸ್ಥಾನ, ಮಂಗೇಶಿ ದೇವಸ್ಥಾನ, ಕವಳೇ ಶಾಂತಾದುರ್ಗಾ , ಶಿರೋಡಾ ಕಾಮಾಕ್ಷಿ ದೇವಸ್ಥಾನ ಇವು ಗೋವಾದಲ್ಲಿ ಪ್ರಮುಖವಾಗಿ ಪ್ರವಾಸಿಗರನ್ನು ಆಕರ್ಷಿಸುವ ದೇವಸ್ಥಾನಗಳಾಗಿದೆ. ಇಲ್ಲಿ ದೇಶ-ವಿದೇಶೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ಕಾಣಬಹುದಾಗಿದೆ.

ಗೋವಾದ ಪೊಂಡಾ ತಾಲೂಕಿನಲ್ಲಿ ಅನೇಕ ಸುಂದರ ದೇವಾಲಯಗಳಿದ್ದು ಈ ದೇವಾಲಯಗಳನ್ನು ನೋಡಲು ಭಕ್ತಾದಿಗಳು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ, ಇಲ್ಲಿನ ಪ್ರಕೃತಿ ಸೌಂದರ್ಯವನ್ನೂ ಆನಂದಿಸುತ್ತಾರೆ. ಇಲ್ಲಿನ ಹಲವು ದೇವಾಲಯಗಳಿಗೆ ಪ್ರತಿದಿನ 500 ರಿಂದ 1000 ಜನ ಪ್ರವಾಸಿಗರು ಭೇಟಿ ನೀಡುತ್ತಾರೆ. ಹಬ್ಬ ಹರಿದಿನಗಳಲ್ಲಿ ಈ ಸಂಖ್ಯೆ ಇನ್ನೂ ಅಧಿಕವಾಗಿರುತ್ತದೆ.

ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್...
ಈ ಹಿಂದೆ ಅನೇಕ ವಿದೇಶಿ ಪ್ರವಾಸಿಗರು ಅವರದ್ದೇ ವೇಷ ಭೂಷಣದಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು. ಇದರಿಂದಾಗಿ ಪೊಂಡಾದಲ್ಲಿರುವ ಅನೇಕ ದೇವಸ್ಥಾನ ಸಮೀತಿಗಳು ದೇಶ-ವಿದೇಶಿಯ ಪ್ರವಾಸಿಗರಿಗೆ ಡ್ರೆಸ್ ಕೋಡ್ ಜಾರಿಗೆ ತಂದಿದ್ದು ದೇವಸ್ಥಾನಕ್ಕೆ ಬರುವ ಪ್ರವಾಸಿಗರು ಸೂಕ್ತ ಉಡುಪುಗಳನ್ನು ಧರಿಸಿರುವುದು ಖಡ್ಡಾಯವಾಗಿದೆ.

ಸ್ಥಳೀಯರಿಗೆ ಉದ್ಯೋಗ...
ಕಡಲ ತೀರಗಳಲ್ಲಿ ಪ್ರವಾಸಿಗರಿಂದ ಉದ್ಯೋಗ ಸೃಷ್ಠಿಯಾದಂತೆಯೇ ದೇವಸ್ಥಾನಗಳಿಂದಲೂ ಸ್ಥಳೀಯರಿಗೆ ಉದ್ಯೋಗ ಲಭಿಸಿದೆ. ಧಾರ್ಮಿಕ ಸ್ಥಳಗಳಲ್ಲಿ ಹೂವು,ಹಣ್ಣು, ಬಟ್ಟೆ,ಸೋಡಾ, ತಂಪು ಪಾನೀಯ ಹೀಗೆ ವಿವಿಧ ಉದ್ಯೋಗ ಲಭಿಸುವಂತಾಗಿದೆ. ಆದ್ಧರಿಂದ ಇಲ್ಲಿ ಕಡಿಮೆ ವಿದ್ಯಾವಂತ ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಲಭಿಸಿದೆ.

ಗೋವಾದ ಕವಳೆಯ ಶಾಂತಾದುರ್ಗಾ ದೇವಸ್ಥಾನದಲ್ಲಿ 2012 ರಿಂದ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ. ಅಂತೆಯೇ ಮಂಗೇಶಿ ದೇವಸ್ಥಾನಕ್ಕೂ ಕೂಡ ವಸ್ತ್ರ ಸಂಹಿತೆ ಜಾರಿಯಲ್ಲಿದೆ.

ಹೀಗೆ ಗೋವಾ ರಾಜ್ಯವು ಕೇವಲ ಕಡಲ ತೀರಗಳಿಂದ ಮಾತ್ರವಲ್ಲದೆಯೇ ಧಾರ್ಮಿಕ ಸ್ಥಳಗಳಿಂದಲೂ ಕೂಡ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಗೋವಾಕ್ಕೆ ಆಗಮಿಸುವ ಬಹುತೇಕ ಪ್ರವಾಸಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿಯೇ ವಾಪಸ್ಸಾಗುವುದನ್ನು ನಾವು ಕಾಣಬಹುದಾಗಿದೆ.