ಸುದ್ಧಿಕನ್ನಡ ವಾರ್ತೆ
Goa : ಗೋವಾದ ಕವಳೆ ಮಠದ ( Kavale Math) ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ರವರು ವಿಶ್ವಸ್ಥ ಮಂಡಳ ಹಾಗೂ ಉಚ್ಛ ನ್ಯಾಯಾಲಯವು ಮಂಜೂರು ಮಾಡಿದ್ದ ಮಾನ್ಯ ಮಾಡಲು ಸಿದ್ಧವಿಲ್ಲದಿದ್ದರೂ ಈ ನಿಯಮಾವಳಿಗಳ ಕಾಗದಪತ್ರಗಳಿಗೆ ಅವರೇ ಖುದ್ದಾಗಿ ಸಹಿ ಮಾಡಿದ್ದಾರೆ. ಇದರಿಂದಾಗಿ ಈ ನಿಯಮಾವಳಿಗಳು ನಮಗೆ ಒಪ್ಪಗೆಯಿಲ್ಲ. ಹಾಗೂ ನಾನು ಹೊಸ ವಿಶ್ವಸ್ಥ ಮಂಡಳ ನೇಮಕ ಮಾಡಿದ್ದೇವೆ. ನಮಗೆ ಜಮೀನು ವಿಕ್ರಿ ಸಂದರ್ಭದಲ್ಲಿ ಸಂಪೂರ್ಣ ಅಧಿಕಾರವಿದೆ ಎಂದು ಸ್ವಾಮೀಜಿಯವರು ತಮ್ಮ ನಿಲುವು ತಳೆದಿದ್ದಾರೆ ಅದರಲ್ಲಿ ಯಾವುದೇ ಸತ್ಯವಿಲ್ಲ. ಎಂದು ಕವಳೆ ಮಠದ ಹಳೇಯ ವಿಶ್ವಸ್ಥ ಮಂಡಳಿಯ ಸದಸ್ಯರು ಹೇಳಿಕೆ ನೀಡಿದ್ದಾರೆ.

ಕವಳೆ ಮಠದ ಹಳೇಯ ವಿಶ್ವಸ್ಥ ಮಂಡಳದ ಸದಸ್ಯರಾದ ಚಂದ್ರಕಾಂತ ಧುಮೆ ರವರು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಅನುಸಾರ- ಶ್ರೀಮಠದ ಸ್ವಾಮೀಜಿಗಳು ಧರ್ಮಾದಾಯ ಆಯುಕ್ತಾಲಯ (ಮುಂಬಯಿ) ಯಲ್ಲಿ ಮಠದ ನೋಂದಣಿ ಆಗಿಲ್ಲ ಎಂದು ಹೇಳುತ್ತಿದ್ದರೂ ಸ್ವಾಮೀಜಿಯವರು ಆದಾಯ ತೆರಿಗೆಯಲ್ಲಿ ವಿನಾಯತಿ ಹಾಗೂ ಎಲ್ಲ ಪದ್ಧತಿಯ ಧರ್ಮಾದಾಯ ಕಾರ್ಯದಲ್ಲಿ ಸಹಭಾಗಿಯಾಗುತ್ತಾರೆ. ಇದರ ಅರ್ಥ ಕವಳೆ ಮಠ ಧರ್ಮಾದಾಯ ಆಯುಕ್ತರ ಬಳಿ ನೋಂದಣಿಯಾಗಿದೆ. ಇದರಿಂದಾಗಿ ಅವರ ಎಲ್ಲ ನಿಯಮ , ಹಾಗೂ ಖಾಯ್ದೆ ಮಠ ಹಾಗೂ ಸ್ವಾಮೀಜಿಗಳಿಗೆ ಅನ್ವಯವಾಗುತ್ತದೆ ಎಂದರು.

ಇದರಿಂದಾಗಿ ಅವರು ಕವಳೆ ಮಠದ ಎಲ್ಲ ವ್ಯವಹಾರಗಳಲ್ಲಿ ಧರ್ಮಾದಯ ಆಯುಕ್ತರ ಪರವಾನಗಿ ಪಡೆಯುವುದು ಅಗತ್ಯವಾಗಿರುತ್ತದೆ. ಹಾಗೆ ಪರವಾನಗಿ ಪಡೆದುಕೊಳ್ಳದಿದ್ದರೆ ಎಲ್ಲ ವ್ಯವಹಾರಗಳೂ ಅನಧೀಕೃತ ಎಂದಾಗುತ್ತದೆ. ಅದರಂತೆಯೇ ಧರ್ಯಾದಾಯ ಆಯುಕ್ತರು ಆಯಾ ಸಂದರ್ಭಗಳಿಗೆ ಅಗತ್ಯವಿರುವ ನಿಯಮ ಹಾಗೂ ಮಠಕ್ಕೆ ಸಂಬಂಧಿಸಿದ ಸಿದ್ಧಪಡಿಸಿರುವ ನಿಯಮಗಳನ್ನು ಪಾಲನೆ ಮಾಡಿಕೊಂಡು ಅದರಂತೆಯೇ ನಡೆದುಕೊಳ್ಳುವುದು ಅಗತ್ಯವಾಗಿರುತ್ತದೆ. ಇಲ್ಲವಾದಲ್ಲಿ ಎಲ್ಲ ವ್ಯವಹಾರಗಳೂ ಅನಧೀಕೃತ ಎಂದಾಗುತ್ತದೆ ಎಂದು ಧೂಮೆ ರವರು ಹೇಳಿಕೆ ನೀಡಿದ್ದಾರೆ. ಉಚ್ಛ ನ್ಯಾಯಾಲಯವು ಹೊರಡಿಸಿರುವ ನಿಯಮಾವಳಿಗಳಿಗೆ ಆ ಸಂದರ್ಭದ ಎಲ್ಲ ವಿಶ್ವಸ್ಥ ಮಂಡಳಿ ಸದಸ್ಯರು ಸಹಿ ಮಾಡಿದ್ದರು. ಇದರಲ್ಲಿ ವಿದ್ಯಮಾನ ಸ್ವಾಮೀಜಿಯವರ ಸಹಿ ಕೂಡ ಇದೆ ಎಂದು ಧುಮೆ ರವರು ಮಾಹಿತಿ ನೀಡಿದರು.

ಪವರ್ ಆಫ್ ಅಟಾರ್ನಿ ಹಿಂಪಡೆದಿಲ್ಲ.,,,,
ಕವಳೆ ಮಠದ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಯವರು ತಮ್ಮ ಹಿಂದಿನ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ರವರ ಹೆಸರಿನಲ್ಲಿ ಪವರ್ ಆಪ್ ಅಟಾರ್ನಿಯನ್ನು ಅವಧೂತ ಕಾಕೋಡಕರ್ ರವರಿಗೆ ನೀಡಲಾಗಿತ್ತೋ ಅದನ್ನು ಇದುವರೆಗೂ ಹಿಂಪಡೆದಿಲ್ಲ. ಎಲ್ಲ ವ್ಯವಹಾರ ಪೂರ್ಣಗೊಂಡ ನಂತರ ಅಥವಾ ಹಿಂಪಡೆದ ನಂತರ ಪವರ್ ಆಫ್ ಅಟಾರ್ನಿ ಕೂಡಲೇ ಹಿಂಪಡೆಯಬೇಕಿತ್ತು. ಪವರ್ ಆಪ್ ಅಟಾರ್ನಿ ಹಿಂಪಡೆಯದಿರುವುದೂ ಒಂದು ದೊಡ್ಡ ತಪ್ಪಾಗಿದೆ ಎಂದು ವಿಶ್ವಸ್ಥ ಮಂಡಳಿಯ ಹಳೇಯ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.