ಸುದ್ದಿಕನ್ನಡ ವಾರ್ತೆ
Goa: ಗೋವಾ ರಾಜ್ಯ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಗೋವಾಕ್ಕೆ ಪ್ರವಾಸಿಗರು ಬರುವುದು ಸಹಜ. ಆದರೆ ಆಮೆಗಳು ಮೊಟ್ಟೆ ಇಡಲೆಂದೇ ಗೋವಾ ಬೀಚ್ ಗೆ ಬರುತ್ತವೆ. ಇದು ಸತ್ಯ. (Turtles come to Goa beach to lay their eggs).
ಗೋವಾದ ಗಾಲಜೀಬಾಗ್ ಮತ್ತು ಆಗೊಂದಾ ( Galazibagh and Agonda in Goa Beech) ಈ ಎರಡೂ ಬೀಚ್ ಗಳನ್ನು ಆಮೆಗಳಿಗೆ ಮೊಟ್ಟೆ ಇಡಲೆಂದೇ ಕಾಯ್ದಿರಿಸಿದ ಬೀಚ್ ಗಳಾಗಿವೆ. ಇದೀಗ ಈ ಎರಡೂ ಬೀಚ್ ಗಳಲ್ಲಿ 19 ಸಾಗರ ಆಮೆಗಳು ಆಗಮಿಸಿದ್ದು 2026 ಮೊಟ್ಟೆಗಳನ್ನು ಹಾಕಿವೆ. ಗಾಲಜೀಬಾಗ್ ಬೀಚ್ ನಲ್ಲಿ 6 ಆಮೆಗಳು 707 ಮೊಟ್ಟೆ ಹಾಕಿವೆ, ಆಗೊಂದಾ ಬೀಚ್ ನಲ್ಲಿ 13 ಆಮೆಗಳು 1319 ಮೊಟ್ಟೆ ಹಾಕಿವೆ. ಈ ಮೊಟ್ಟೆಗಳು ರಾಜ್ಯ ಅರಣ್ಯ ಇಲಾಖೆ ಕಣ್ಗಾವಲಿನಲ್ಲಿವೆ.
ಆಗೊಂದಾ ಬೀಚ್ ನಲ್ಲಿ ಕಳೆದ ಡಿಸೆಂಬರ್ ನಲ್ಲಿ ಎರಡು ಆಲಿವ್ ರಿಡಲೆ ಆಮೆಗಳು ಬಂದು 172 ಮೊಟ್ಟೆ ಇಟ್ಟಿದ್ದವು. ಸಾಧಾರಣವಾಗಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಿಂದ ಈ ಎರಡೂ ಬೀಚ್ ಗಳಲ್ಲಿ ಮೊಟ್ಟೆ ಇಡಲು ಆಗಮೆಗಳು ಆಗಮಿಸುತ್ತವೆ. ಮೊಟ್ಟೆಯೊಡೆದು ಆಮೆ ಹೊರಬರಲು 45 ರಿಂದ 50 ದಿನಗಳು ಹಿಡಿಯುತ್ತದೆ.