ಸುದ್ಧಿಕನ್ನಡ ವಾರ್ತೆ
ಬೈಲಹೊಂಗಲ-ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ  (Akhil Bharat Sharana Sahitya Parishad) ಬೈಲಹೊಂಗಲ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ನೇಮಕವಾದ ಪ್ರಯುಕ್ತ ಸ್ವಾವಲಂಭನ ಪೌಂಡೇಶನ್ ಅಧಕ್ಷ, ಕಾರ್ಮಿಕ ಧುರೀಣ ಸಂತೋಷ ಚಂದ್ರಪ್ಪ ಕೊಳವಿ ಅವರಿಗೆ ಚನ್ನಮ್ಮ ಸಮಾಧಿ ರಸ್ತೆಯಲ್ಲಿನ ಗಣಾಚಾರಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಕೇಂದ್ರ ಬಸವ ಸಮಿತಿ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ (Kannada Sahitya Parishad) ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ ಸನ್ಮಾನಿಸಿದರು.

ಶಿಕ್ಷಣ ತಜ್ಞ , ಕನ್ನಡ ಭಾಷೆಯ ಸಂಪನ್ಮೂಲ ವ್ಯಕ್ತಿ ಡಾ. ಮಲ್ಲೇಶ ಈರಪ್ಪ ಕಾದ್ರೊಳ್ಳಿ (ಕುರಗುಂದ) ಅವರು ಅಭಿನಂದನಾ ಪರ ಮಾತನಾಡಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ, ತಾಲೂಕಾ, ಹೋಬಳಿ ಘಟಕಗಳ ಮುಖಾಂತರ ಬಸವಾದಿ ಶಿವ ಶರಣರ ಜೀವನ, ಸಾಧನೆ,
ಸಂದೇಶಗಳನ್ನು ಪ್ರಚುರಪಡಿಸುವಲ್ಲಿ ಹಿರಿದ್ದಾಗಿದ್ದು ನೂತನ ಅಧ್ಯಕ್ಷರು ತಾಲೂಕಿನ ಎಲ್ಲರ ಮನೆ- ಮನಗಳಿಗೆ, ಶಾಲಾ ಕಾಲೇಜುಗಳಿಗೆ ವಚನ ಸಾಹಿತ್ಯವನ್ನು
ತಲುಪಿಸಿ ಪ್ರಸ್ತುತ ಯುವ ಪೀಳಿಗೆಗೆ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಪಾತ್ರ ವಹಿಸಲಿ ಎಂದರು.

ಪುರಸಭೆ ಮಾಜಿ ಸದಸ್ಯ, ಹಿರಿಯ ಸಹಕಾರಿ ಧುರೀಣ ಬಸವರಾಜ ಕನ್ನೂರ ಮಾತನಾಡಿ, ಸಂತೋಷ ಕೊಳವಿ ಅವರು ಜಿಲ್ಲೆಯ ಅಸಂಘಟಿತ ಕಾರ್ಮಿಕರಿಗೆ ಸರಕಾರದ ಅನೇಕ ಸೌಲಭ್ಯಗಳನ್ನು ಕೊಡಿಸುವ ಮೂಲಕ ಜಿಲ್ಲೆಯಾಧ್ಯಂತ ಚಿರ ಪರಿಚಿತರಾಗಿರುವ ಇವರಿಂದ ಶರಣ ಸಾಹಿತ್ಯ ಪರಿಷತ್ತು
ರಾಜ್ಯದಲ್ಲಿಯೇ ಮಾದರಿಯನ್ನಾಗಿಸಲು ಶ್ರಮಿಸುತ್ತಾರೆಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.

ಅಮಾನತ್ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೆಹಬೂಬ್ ಸುಭಾನಿ ಖಿಲಾರಿ ತಮ್ಮ ಅನಿಸಿಕೆ ವ್ಯಕ್ತಪಡಿಸಿ ಶರಣರ ತತ್ವ ಪ್ರಚಾರದಲ್ಲಿ ತೊಡಗಿರುವ ಈ ಸಂಘಟಣೆಗೆ ಸಹಾಯ, ಸಹಕಾರ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಧ್ಯಾಪಕ
ಡಾ.ರಾಘವೇಂದ್ರ ಹುಲಕುಂದ, ಗಣಾಚಾರಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಪೆಂಟೇದ, ಕನ್ನಡ ಜಾನಪದ ಪರಿಷತ್ತಿನ ಬೈಲಹೊಂಗಲ ತಾಲೂಕಾ ಘಟಕದ ವಕ್ತಾರ ಮಹಾಂತೇಶ ಮಲ್ಲಪ್ಪ ರಾಜಗೋಳಿ ಮಾತನಾಡಿದರು. ವ್ಹಿ.ಡಿ.ಮಾಕಾರ ಸ್ವಾಗತಿಸಿದರು. ಸೋಮಶೇಖರ ಸರದಾರ ನಿರೂಪಿಸಿ, ವಂದಿಸಿದರು. ಪೋಟೋ ಶೀರ್ಷಿಕೆ- ಬೈಲಹೊಂಗಲದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬೈಲಹೊಂಗಲ ತಾಲೂಕಾ ಘಟಕದ
ನೂತನ ಅಧ್ಯಕ್ಷ ಸಂತೋಷ ಕೊಳವಿಯನ್ನು ಸನ್ಮಾನಿಸಲಾಯಿತು.