ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ಃ ಲಾರಿ ಪಲ್ಟಿ ದುರಂತ ನಸುಕಿನ ಜಾವ ಸಂಭವಿಸಿದ್ದು ಅಪಾರ ಪ್ರಮಾಣದಲ್ಲಿ ಮಂಜು ಮುಸುಕಿತ್ತು.ಚಾಲಕನ ನಿರ್ಲಕ್ಷತನ ನಿದ್ರೆಯ ಮಂಪರು ಅಪಘಾತಕ್ಕೆ ಕಾರಣ.ಯಾವುದೇ ಟೈರ್ ಸ್ಪೋಟ,ಎದುರುಗಡೆಯ ವಾಹನ ಮದು ಡಿಕ್ಕಿ ಯಾವುದೂ ಅಲ್ಲ ಎಂದು ಕರ್ನಾಟಕ ರಾಜ್ಯ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಶರಶ್ಚಂದ್ರ ರಾತ್ರಿ ಮಾದ್ಯಮಕ್ಕೆ ಮಾಹಿತಿ ನೀಡಿದರು.
ಅವರು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ವಿವರಣೆ ಪಡೆದುಮಾಹಿತಿ ನೀಡಿದರು.ಸರಕು ಸಾಗಾಣಿಕಾ ವಾಹನದಲ್ಲಿ ಇಷ್ಟು ಜನರನ್ನು ತುಂಬಿದ್ದು ಅಪರಾಧ.ಈ ಬಗ್ಗೆ ತನಿಖೆ ನಡೆಯಲಿದೆ.ಲಾರಿಯಲ್ಲಿ ೨೯ ಜನ ಇದ್ದರು.೧೩ ಜನ ಕ್ಯಾಬಿನ್ ನಲ್ಲಿ ಇದ್ದರು.೧೦ ಜನ ಸಾವನ್ನಪ್ಪಿದ್ದಾರೆ.ಉಳಿದವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ ಅವರು ಲಾರಿ ಚಾಲಕ ನಿಜಾಂ ಪೋಲಿಸ್ ವಶದಲ್ಲಿದ್ದು ವಿಚಾರಣೆಗೊಳಪಡಿಸಲಾಗುತ್ತಿದೆ.ಹೆದ್ದಾರಿ ಅಂಚಿನಲ್ಲಿ ವಾಲ್ ನಿರ್ಮಿಸುವಂತೆ ಸೂಚನೆ ನೀಡಿದೆ ಎಂದು ತಿಳಿಸಿದರು.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ನಾರಾಯಣ,ವಿಧಿ ವಿಜ್ಞಾನ ಪ್ರಯೋಗಾಲಯದ ಸಕಲೇಶ ,ದಾಂಡೇಲಿ ಡಿವೈಎಸ್ಪಿ ಶಿವಾನಂದ ,ಸ್ಥಳಿಯ ಪಿಐ ರಮೇಶ ಹಾನಾಪುರ ಇದ್ದರು.