ಸುದ್ದಿ ಕನ್ನಡ ವಾರ್ತೆ
Goa: ಗೋವಾದ ಪೊಂಡ ಶ್ರೀ ಗೋಪಾಲ ಗಣಪತಿ ಪರಮಗುಡಿ ದೇವಸ್ಥಾನದ ಅರ್ಚಕರಾಗಿದ್ದ ಶ್ರೀ ಸುಬ್ರಾಯ್ ಭಟ್ ಹಾಗೂ ಶ್ರೀಮತಿ ಅನ್ನಪೂರ್ಣ ಭಟ್ ರವರ ಪ್ರಥಮ ಪುತ್ರಿ ಶ್ವೇತಾ ರವರ ವಿವಾಹವು ಶ್ರೀಕಾಂತ್ ಭಟ್ ರವರೊಂದಿಗೆ ಜನವರಿ 22ರಂದು ಪರಮ ಗುಡಿ ಸಭಾಗಗ್ರಹದಲ್ಲಿ ಅದ್ದೂರಿಯಾಗಿ ಜರುಗಿತು.
ಶ್ರೀ ಸುಬ್ರಾಯ್ ಭಟ್ ಇವರು ಮೂಲತಹ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಗುಂದ ಕೊಂಬ ಗ್ರಾಮದವರಾಗಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಗೋವಾದ ಪೊಂಡ ದಲ್ಲಿ ಪುರೋಹಿತರಾಗಿದ್ದಾರೆ.
ಈ ವಿವಾಹ ಸಮಾರಂಭಕ್ಕೆ ಗೋವಾ ರಾಜ್ಯದಿಂದ ಮಾತ್ರವಲ್ಲದೆ ಕರ್ನಾಟಕದಿಂದಲೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪುರೋಹಿತರು, ಬಂದು ಮಿತ್ರರು ಆಗಮಿಸಿದ್ದರು.
ನವ ವಧುವರರಿಗೆ ಸುದ್ದಿ ಕನ್ನಡ ವಾಹಿನಿ ಅಭಿನಂದನೆ ಸಲ್ಲಿಸುತ್ತದೆ.