ಸುದ್ಧಿಕನ್ನಡ ವಾರ್ತೆ
Goa : ಗೋವಾದ ಬಿಚೋಲಿಯಲ್ಲಿ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಹಲವು ದಿನಗಳಿಂದ ಬಿಚೋಲಿಯ ಜನವಸತಿ ಪ್ರದೇಶದಲ್ಲಿ ಓಡಾಡುತ್ತ ಜನರಲ್ಲಿ ಭಯ ಹುಟ್ಟಿಸಿತ್ತು.

ಅರಣ್ಯ ಇಲಾಖೆಯು ಬಿಚೋಲಿ ಬರಿಸರದಲ್ಲಿ ಹಾಕಿದ್ದ ಬೋನಿಗೆ ರಾತ್ರಿಯ ವೇಳೆ ಚಿರತೆ ಸಿಕ್ಕಿಬಿದ್ದಿದೆ. ಈ ಚಿರತೆಯನ್ನು ಬೋಂಡ್ಲಾ ಪ್ರಾಣಿಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳೆದ ಹಲವು ದಿನಗಳಿಂದ ಜನವಸತಿ ಪ್ರದೇಶಕ್ಕೆ ಬರುತ್ತಿದ್ದ ಈ ಚಿರತೆಯು ಹಲವು ನಾಯಿಗಳನ್ನು ಹಿಡಿದು ತಿಂದಿತ್ತು. ಇದರಿಂದಾಗಿ ಈ ಪರಿಸರದಲ್ಲಿ ವಾಸಿಸುತ್ತಿದ್ದ ಜನ ಭಯಭೀತರಾಗಿದ್ದರು. ಇದೀಗ ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದಿರುವ ಸ್ಥಳದಲ್ಲಿಯೇ ಕಳೆದ ಒಂದು ವರ್ಷದ ಹಿಂದೆ ಚಿರತೆಯೊಂದನ್ನು ಸೆರೆ ಹಿಡಿದಿದ್ದರು.