ಸುದ್ಧಿಕನ್ನಡ ವಾರ್ತೆ
Goa: ಪಣಜಿಯ ಕಲಾ ಅಕಾಡಮಿಯ ದರ್ಯಾ ಸಂಗಮದಲ್ಲಿ ಪ್ರತಿ ವರ್ಷದಂತೆಯೇ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಲೊಕೋತ್ಸವ ಶುಕ್ರವಾರ ಜನವರಿ 17 ರಿಂದ ಆರಂಭಗೊಂಡಿದೆ.
ಲೋಕೋತ್ವವ ಜನವರಿ 26 ರವರೆಗೆ ನಡೆಯಲಿದೆ. ಈ ಉತ್ಸವ ಪ್ರಸಕ್ತ 24 ನೇಯ ವರ್ಷದ್ದಾಗಿದೆ. ದೇಶದ 20 ರಾಜ್ಯಗಳ ಸುಮಾರು 600 ಕಲಾವಿದರು ಈ ಲೋಕೋತ್ಸವದಲ್ಲಿ ತಮ್ಮ ಕಲಾ ಪ್ರದರ್ಶನ ನೀಡಲಿದ್ದಾರೆ.
ಪ್ರಸಕ್ತ ಲೋಕೋತ್ಸವದಲ್ಲಿ ರಾಜಸ್ಥಾನದ ಮಾಂಗಾಣಿಯಾರ, ಕಾಲಬೆಲಿಯಾ ಚರಿ ನೃತ್ಯ, ಅಸ್ಸಾಂನ ಬಿಹು, ಗುಜರಾತ್ ನ ಗರಬ್, ಮಹಾರಾಷ್ಟ್ರದ ಪೊವಾಡಾ ಹಾಗೂ ಲಮಾಣಿ, ಪಶ್ಚಿಮ ಬಂಗಾಲದ ಪುರುಲಿಯಾ ಛಾವು, ಕರ್ನಾಟಕದ ಡೊಳ್ಳು ಕುಣಿತ ಸೇರಿದಂತೆ ಇತರ ರಾಜ್ಯಗಳ ಲೋಕನೃತ್ಯ ಪ್ರದರ್ಶನಗೊಳ್ಳಲಿದೆ.
ಲೋಕೋತ್ಸವದಲ್ಲಿ ಸುಮಾರು 550 ಸ್ಟಾಲ್ ಗಳನ್ನು ಹಾಕಲಾಗಿದೆ. ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಹಸ್ತಕಲಾ ಹಾಗೂ ಖಾದ್ಯ ಪದಾರ್ಥಗಳ ಮಾರಾಟ ನಡೆಯಲಿದೆ. ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಲೋಕನೃತ್ಯಗಳ ಕಾರ್ಯಕ್ರಮ ನಡೆಯಲಿದೆ.