ಸುದ್ಧಿಕನ್ನಡ ವಾರ್ತೆ
Goa Ponda: ಕುಟುಂಬ ರಕ್ಷಣೆ ಹಾಗೂ ಸಮಾಜಕಲ್ಯಾಣ ಉದ್ದೇಶದಿಂದ ಧಾರ್ಮಿಕ ಕಾರ್ಯಕ್ರಮಗಳ್ನು ಮಾಡುತ್ತಿರುವ ಸಮಸ್ತ ಗೋಮಂತಕೀಯ ವೈದಿಕ, ಅರ್ಚಕರು, ಪುರೋಹಿತರ ಒಂದು ದಿನದ “ಸಮ್ಮೇಳನವನ್ನು” ಜನವರಿ 19 ರಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ಕವಳೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಲಾಗಿದೆ.

ಪರಮಪೂಜ್ಯ ಶ್ರೀ ವಿದ್ಯಾನರಸಿಂಹ ಭಾರತೀಸ್ವಾಮೀಜಿ ಕರವೀರ ಪೀಠ ರವರ ದಿವ್ಯ ಸಾನಿಧ್ಯದಲ್ಲಿ ಪುರೋಹಿತ ಬ್ರಾಹ್ಮಣ ಸಂಘ ಮತ್ತು ದ್ರಾವಿಡ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಈ ಬೃಹತ್ ಸಮ್ಮೇಳನ ಆಯೋಜಿಸಲಾಗಿದೆ.

ಈ ಸಮ್ಮೇಳನದ ಅಂಗವಾಗಿ ಜನವರಿ 18 ರಂದು ಸಂಜೆ 5 ರಿಂದ 7 ಗಂಟೆಯವರೆಗೆ ಶೋಭಾಯಾತ್ರೆ ನಡೆಯಲಿದೆ. ಜನವರಿ 19 ರಂದು ಬೆಳಿಗ್ಗೆ 8 ರಿಂದ 9 ಗಂಟೆಯರೆಗೆ ನೋಂದಣಿ ಮತ್ತು ಉಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಸಮ್ಮೇಳನ ಉಧ್ಘಾಟನೆ, ವೈದಿಕ ಮಂಗಳಾಚರಣೆ, ದೀಪ ಪ್ರಜ್ವಲನ, ಸ್ವಾಗತ, ಗುರುಪೂಜನ, ಪುರೋಹಿತ ಸತ್ಕಾರ ಸಮಾರಂಭ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಸಚಿವ ಸುದೀನ ಧವಳೀಕರ್, ಶ್ರೀ ಶಾಂತಾರಾಮ ದುಂಡೀರಾಜ ಭಾನೊಸೆ ನಾಸಿಕ, ಸಮ್ಮೇಳನಾಧ್ಯಕ್ಷರಾಗಿ ದಿಲೀಪ ಧವಳೀಕರ್, ರವರು ಉಪಸ್ಥಿತರಿರುವರು. ಸಮ್ಮೇಳನದಲ್ಲಿ ಪರಮಪೂಜ್ಯ ಶ್ರೀಗಳ ಆಶೀರ್ವಚನ ನೀಡಲಿದ್ದಾರೆ. ನಂತರ ವಿವಿಧ ವಿಷಯಗಳ ಕುರಿತು ಚರ್ಚಾ ಕಾರ್ಯಕ್ರಮ ನಡೆಯಲಿದೆ.

ಈ ಎಲ್ಲ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.